ಭಾನುವಾರ, ಜೂನ್ 13, 2021
23 °C
ಹಂದಿ ಕಳವಿಗೆ ಯತ್ನ

ಚಿತ್ರದುರ್ಗ: ಮೂವರು ಹಂದಿ ಸಾಕಣೆದಾರರ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂದಿ ಸಾಕಾಣಿಕೆ–ಸಾಂದರ್ಭಿಕ ಚಿತ್ರ

ಚಿತ್ರದುರ್ಗ: ಹಂದಿ ಕಳವಿಗೆ ಯತ್ನಿಸಿದ ಗುಂಪೊಂದು ಮೂವರನ್ನು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿಯಲ್ಲಿ ಸೋಮವಾರ ನಸುಕಿನಲ್ಲಿ ನಡೆದಿದೆ.

ನಾಯಕನಹಟ್ಟಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿರುವ ಷೆಡ್‌ನಲ್ಲಿ ಈ ಘಟನೆ ನಡೆದಿದೆ. ಸೀನಪ್ಪ (53), ಯಲ್ಲೇಶಿ (30),ಮಾರೇಶಿ (30) ಕೊಲೆಯಾದವರು.

ಷಡ್‌ ಮೇಲೆ ಏಕಾಏಕಿ ದಾಳಿ ನಡೆಸಿದ ಗುಂಪೊಂದು ಹಂದಿ ಸಾಕಣೆದಾರರ ಕಣ್ಣಿಗೆ ಖಾರದಪುಡಿ ಎರಚಿದೆ. ಮಾರಕಾಸ್ತ್ರಗಳಿಂದ ದಾಳಿ ನಡೆಸಿದೆ. ಯಲ್ಲೇಶಿ ಮತ್ತು ಮಾರಪ್ಪ ಎಂಬುವರ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಸೀನಪ್ಪ ಎಂಬುವವರ ಮೇಲೆ ತಲೆಯನ್ನು ಕತ್ತರಿಸಿ ಬಿಸಾಡಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು