ಪೊಲೀಸರ ಡಾನ್ಸ್‌ ವಿಡಿಯೊ ವೈರಲ್‌

7

ಪೊಲೀಸರ ಡಾನ್ಸ್‌ ವಿಡಿಯೊ ವೈರಲ್‌

Published:
Updated:

ಚಿತ್ರದುರ್ಗ: ಹಾಡು ಹೇಳುತ್ತ, ಕುಣಿಯುತ್ತ ಹೊಸ ವರ್ಷವನ್ನು ಬರಮಾಡಿಕೊಂಡ ಪೊಲೀಸರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೊಸದುರ್ಗದ ಎಪಿಎಂಸಿ ಆವರಣದಲ್ಲಿ ಡಿ.31ರಂದು ರಾತ್ರಿ ಈ ಕಾರ್ಯಕ್ರಮ ನಡೆದಿತ್ತು. ಸಮವಸ್ತ್ರ ಇಲ್ಲದಿರುವುದರಿಂದ ಬಹುತೇಕ ಎಲ್ಲ ಪೊಲೀಸರು ಸಾಮಾನ್ಯರಂತೆ ಕಾಣುತ್ತಿದ್ದಾರೆ.

ಪೊಲೀಸ್‌ ಅಧಿಕಾರಿಯೊಬ್ಬರು ‘ಚುಟು ಚುಟು ಅಂತೈತಿ...’ ಎಂಬ ಹಾಡು ಹೇಳುತ್ತಿದ್ದಂತೆ ಎಲ್ಲರೂ ಕುಣಿಯತೊಡಗುತ್ತಾರೆ. ಜೊತೆಗೆ ಇದ್ದ ಇತರರು ಹಾಡಿಗೆ ಧ್ವನಿಗೂಡಿಸುತ್ತಾರೆ. ‘ಮಂತ್ಲಿ ಜಾಸ್ತಿ ಬತ್ರೈತಿ ಕಣೋ...’ ಎಂಬ ಒಕ್ಕಣೆಯೂ ಗಮನ ಸೆಳೆಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !