ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ತೆರಿಗೆ ಬಾಕಿ: ಪಟ್ಟಿ ಶೀಘ್ರ ಬಿಡುಗಡೆ

Last Updated 8 ಫೆಬ್ರುವರಿ 2018, 19:39 IST
ಅಕ್ಷರ ಗಾತ್ರ

ಬೆಂಗಳೂರು: ಪಾಲಿಕೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಪ್ರಮುಖ 25 ಆಸ್ತಿ ಮಾಲೀಕರ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಹೇಳಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಸ್ತಿ ತೆರಿಗೆ ಕಟ್ಟದೇ ಇರುವವರ ಪಟ್ಟಿಯನ್ನು ವಲಯವಾರು ಸಿದ್ಧ
ಪಡಿಸಲಾಗುತ್ತಿದೆ. ತೆರಿಗೆ ವ್ಯಾಪ್ತಿಯಿಂದ ಬಿಟ್ಟು ಹೋಗಿರುವ ಸ್ವತ್ತುಗಳನ್ನು ತೆರಿಗೆ ಜಾಲಕ್ಕೆ ತರಲಾಗುತ್ತದೆ’ ಎಂದು ಹೇಳಿದರು.

ಪಾಲಿಕೆ ಬಜೆಟ್‌ ಕರಡು ಸಿದ್ಧಪಡಿಸಿದ್ದು, ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಅಂತಿಮ ರೂಪ ನೀಡಲಾಗುತ್ತದೆ. ಇದು ವಾಸ್ತವಿಕ ಬಜೆಟ್‌ ಆಗಿರುತ್ತದೆ. ಪಾಲಿಕೆಯ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ₹3,300 ಕೋಟಿ ಇದ್ದ ಸಾಲವನ್ನು ₹1,231 ಕೋಟಿಗೆ ಇಳಿಸಲಾಗಿದೆ. ಅಡಮಾನ ಇಟ್ಟಿರುವ ಏಳು ಕಟ್ಟಡಗಳನ್ನು ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಸಾಲ ಪಡೆಯುವ ಶ್ರೇಯಾಂಕ ಜಾಸ್ತಿ ಆಗಿದೆ ಎಂದು ಹೇಳಿದರು.

2017-18ನೇ ಸಾಲಿನಲ್ಲಿ ₹250 ಕೋಟಿ ವೆಚ್ಚದಲ್ಲಿ 23.76 ಕಿ.ಮೀ. ಉದ್ದದ 23 ರಸ್ತೆಗಳ ಅಭಿವೃದ್ಧಿಗೆ ಸಮಗ್ರ ಯೋಜನಾ ವರದಿ ಸಿದ್ಧಪ
ಡಿಸಲಾಗುತ್ತಿದೆ ಎಂದರು.

ಅಂಕಿ–ಅಂಶ


17.04 ಲಕ್ಷ

ನಗರದಲ್ಲಿರುವ ಒಟ್ಟು ಆಸ್ತಿಗಳು

₹2,600 ಕೋಟಿ

ಆಸ್ತಿ ತೆರಿಗೆ ಸಂಗ್ರಹದ ಗುರಿ

₹2,044 ಕೋಟಿ

ಈವರೆಗೆ ಸಂಗ್ರಹಗೊಂಡಿರುವ ಆಸ್ತಿ ತೆರಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT