ಮಳೆ: ನೆಲಕ್ಕುರುಳಿದ ರಾಗಿ, ಮೆಕ್ಕೆಜೋಳ

ಚಿಕ್ಕಜಾಜೂರು: ಗ್ರಾಮದಲ್ಲಿ ಶುಕ್ರವಾರ ಸುರಿದ ಗಾಳಿ, ಮಳೆಗೆ ರಾಗಿ, ಮೆಕ್ಕೆಜೋಳದ ಪೈರುಗಳು ನೆಲಕ್ಕುರುಳಿವೆ.
ಶುಕ್ರವಾರ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಗಾಳಿ ಸಹಿತ ಬಿರು ಮಳೆಯಾಯಿತು. ಇದರಿಂದಾಗಿ ಗ್ರಾಮದ ಹಲವು ಜಮೀನುಗಳಲ್ಲಿ ಕೊಯ್ಲಿಗೆ ಬಂದಿದ್ದ ರಾಗಿ, ಮೆಕ್ಕೆಜೋಳದ ಪೈರುಗಳು ನೆಲಕ್ಕುರುಳಿವೆ. ಗ್ರಾಮದಲ್ಲಿ 25.8 ಮಿ.ಮೀ. ಆಗಿದೆ.
ಮಳೆಯಿಂದಾಗಿ ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾಯಿತು. ಪಟಾಕಿ ಹೊಡೆಯುವ ಹುಮ್ಮಸ್ಸಲ್ಲಿದ್ದ ಮಕ್ಕಳ ಆಸೆಗೆ ಮಳೆರಾಯ ಅಡ್ಡಿಯಾದನು.
ದೀಪಾವಳಿಯ ವಿಶೇಷಗಳಲ್ಲಿ ಹಿರಿಯರಿಗೆ ಪೂಜೆ ಮತ್ತು ದೇವಿರಮ್ಮನಿಗೆ ಆರತಿ ಬೆಳಗುವುದು ಸಂಪ್ರದಾಯ. ಮಳೆ ನಿಂತ ಬಳಿಕ, ಬಹುತೇಕ ಮನೆಗಳಲ್ಲಿ ಹಿರಿಯರಿಗೆ ಪೂಜೆ ಸಿದ್ಧತೆ ನಡೆಸಲಾಯಿತು. ಅಜ್ಜಿ, ಅಜ್ಜನ ಸಂಕೇತವಾಗಿ ತಂಬಿಗೆ ಇಟ್ಟು, ಅವುಗಳಿಗೆ ಹೊಂಬಾಳೆಯನ್ನು ಇಟ್ಟು ಸಿಂಗರಿಸಲಾಗಿತ್ತು. ಹೆಣ್ಣು ಮಕ್ಕಳು ಮನೆಯ ಆವರಣದಲ್ಲಿ ದೇವಿರಮ್ಮನನ್ನು ಪ್ರತಿಷ್ಠಾಪಿಸಿ, ಪೂಜೆ ಸಲ್ಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.