ಚಿತ್ರದುರ್ಗ ಜಿಲ್ಲೆ: ಬಾರದ ಮಳೆ, ಬಿತ್ತನೆ ಕುಂಠಿತ

7
ಶೇಂಗಾ ಬಿತ್ತನೆ ಅವಧಿ ಮುಕ್ತಾಯ, ಪರ್ಯಾಯ ಬೆಳೆಗೆ ಸಲಹೆ

ಚಿತ್ರದುರ್ಗ ಜಿಲ್ಲೆ: ಬಾರದ ಮಳೆ, ಬಿತ್ತನೆ ಕುಂಠಿತ

Published:
Updated:
Deccan Herald

ಮೊಳಕಾಲ್ಮುರು: ಶ್ರಾವಣ ಆರಂಭವಾದರೂ ತಾಲ್ಲೂಕಿನಲ್ಲಿ ವರುಣನ ಕೃಪೆ ಇಲ್ಲದ ಕಾರಣ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ.

ತಾಲ್ಲೂಕಿನ ಒಟ್ಟು ಬಿತ್ತನೆ ಪ್ರದೇಶ ಪೈಕಿ ಶೇ 90 ರಷ್ಟು ಮಳೆಯಾಶ್ರಿತವಾಗಿದೆ. ಪರಿಣಾಮ ವಾರ್ಷಿಕ ಒಂದು ಬೆಳೆ ಮಾತ್ರ ಬರುತ್ತದೆ.  ಐದಾರು ವರ್ಷದಿಂದ ಸತತ ಮಳೆ ಕೈಕೊಡುತ್ತಿರುವ ಕಾರಣ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ವರ್ಷವಂತೂ ಒಂದೂ ಹದ ಹಸಿಯಾಗದೇ ಅಲ್ಲಲ್ಲಿ ತುಂತುರು ಹಸಿಗೆ ಬಿತ್ತನೆ ಮಾಡಲಾಗಿದೆ.

ಕೃಷಿ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ. ರವಿ ಮಾಹಿತಿ ನೀಡಿ, ‘ತಾಲ್ಲೂಕಿನಲ್ಲಿ ಒಟ್ಟು 32,500 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಈ ಪೈಕಿ ಪ್ರಸ್ತುತ 19,500 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಆದರೆ ಒಂದು ವಾರದ ಹಿಂದೆ ಕೇವಲ 5,500 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಈಗ ಬೀಳುತ್ತಿರುವ ಸಣ್ಣ ಮಳೆಗೆ ಉಳಿದಿದ್ದು ಬಿತ್ತನೆ ಮಾಡಲಾಗಿದೆ’ ಎಂದು ಹೇಳಿದರು.

2– 3 ದಿನಗಳಿಂದ ಹೆಚ್ಚು ಬಿತ್ತನೆ ಮಾಡಲಾಗುತ್ತಿದೆ. ಒಟ್ಟು ಬಿತ್ತನೆ ಪೈಕಿ ಶೇಂಗಾ ಪ್ರಧಾನವಾಗಿ ಬಿತ್ತನೆ ಮಾಡಲಾಗಿದೆ. ಜುಲೈ ಮಧ್ಯಾಂತರ ಅವಧಿ ಶೇಂಗಾ ಬಿತ್ತನೆಗೆ ಸೂಕ್ತ ಸಮಯ. ಈಗ ಶೇಂಗಾ ಬಿತ್ತನೆ ಒಳ್ಳೆಯದಲ್ಲ. ಬದಲಾಗಿ ನವಣೆ, ರಾಗಿ, ಆರ್ಕ, ಸಜ್ಜೆ ಬಿತ್ತನೆ ಮಾಡುವಂತೆ ಪ್ರಚಾರ ಮಾಡಲಾಗಿದೆ ಎಂದು ಹೇಳಿದರು.

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !