ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ಘೋಷಣೆಗೆ ರೈತ ಸಂಘ ಒಲವು

ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ
Last Updated 4 ಫೆಬ್ರುವರಿ 2020, 15:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಳವಳಿಗಾರರ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿವೆ. ಪಾರದರ್ಶಕ ವ್ಯವಸ್ಥೆ ರೂಪಿಸಿಕೊಳ್ಳಲು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಪ್ರತಿ ವರ್ಷ ತಮ್ಮ ಆಸ್ತಿ ಘೋಷಣೆ ಮಾಡಿಕೊಳ್ಳಬೇಕೆಂಬ ನೀತಿಯನ್ನು ರೈತ ಸಂಘ ಅಳವಡಿಸಿಕೊಳ್ಳುತ್ತಿದೆ ಎಂದು ಸಂಘದ ರಾಜ್ಯ ಘಟಕದ ಬಡಗಲಪುರ ನಾಗೇಂದ್ರ ತಿಳಿಸಿದರು.

ನಗರದ ರೈತ ಭವನದಲ್ಲಿ ಸೋಮವಾರ ನಡೆದ ರೈತ ಸಮ್ಮಿಲನ ಹಾಗೂ ಜಿಲ್ಲಾ ಸಂಘದ ಪುನರ್ ರಚನೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಗಾಂಧಿ ಟೋಪಿಯಂತೆ ಹಸಿರು ಟವೆಲ್‌ ಕೂಡ ದುರ್ಬಳಕೆ ಆಗುತ್ತಿದೆ. ರೈತ ಚಳವಳಿ ಸ್ವಾರ್ಥಕ್ಕೆ ಬಳಕೆಯಾಗದಂತೆ ಎಚ್ಚರವಹಿಸುವ ಕಾಲ ಸನ್ನಿಹಿತವಾಗಿದೆ. ಚಳವಳಿಗಾರರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿವೆ. ಹೀಗಾಗಿ, ಆಸ್ತಿ ಘೋಷಣೆ ಮಾಡಿಕೊಳ್ಳುವುದು ಸೂಕ್ತ. ರೈತ ಸಂಘಟನೆ ಹಾಗೂ ಚಳವಳಿಗೆ ಶಿಸ್ತು ಬದ್ಧ ಸ್ವರೂಪ ಕೊಡಲು ಸಂವಿಧಾನ ರಚನೆ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ರೈತರು ಹಲವು ಕಾರಣಗಳಿಗೆ ಭೂಮಿ ಕಳೆದುಕೊಳ್ಳುತ್ತಿದ್ದಾರೆ. ರೈತರ ಮಕ್ಕಳು ಹೋಟೆಲ್, ವಸತಿ ಗೃಹಗಳಲ್ಲಿ ಕೆಲಸ ಮಾಡ್ತಿದ್ದಾರೆ. ನಗರ ಪ್ರದೇಶದ ಜನಸಾಮಾನ್ಯವರನ್ನು ಚಳವಳಿ ಒಳಗೊಳ್ಳುವ ಅಗತ್ಯವಿದೆ. ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಸೀಮಿತವಾಗಿದ್ದ ಚಳವಳಿಯನ್ನು ಇನ್ನಷ್ಟು ವಿಸ್ತರಿಸುವ ಅಗತ್ಯವಿದೆ. ಚಳವಳಿ ಮಹತ್ವದ ಬಗ್ಗೆ ಯುವ ರೈತರಲ್ಲಿ ಅರಿವು ಮೂಡಿಸಬೇಕಿದೆ’ ಎಂದು ಸಲಹೆ ನೀಡಿದರು.

‘ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಅವರ 84ನೇ ಜನ್ಮ ದಿನಾಚರಣೆಯನ್ನು ಚನ್ನಪಟ್ಟಣದಲ್ಲಿ ಫೆ.13 ರಂದು ಆಯೋಜಿಸಲಾಗಿದೆ. ರೈತ ವಿರೋಧಿ ಕಾನೂನು ಬಗ್ಗೆ ಜಾಗೖತಿ ಮೂಡಿಸಲಾಗುತ್ತಿದೆ. ಬೀಜ ಕಾಯ್ದೆ 2019 ಮತ್ತು ಭೂಮಿ ಗುತ್ತಿಗೆ ಕಾಯ್ದೆ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಚರ್ಚೆ ನಡೆಯಲಿದೆ’ ಎಂದು ಹೇಳಿದರು.

ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಉಪಾಧ್ಯಕ್ಷರಾದ ಎಂ.ರಾಮು ಚನ್ನಪಟ್ಟಣ, ರಾಮಕೖಷ್ಣಯ್ಯ, ಕೆ.ಪಿ.ಭೂತಯ್ಯ, ಮಂಡ್ಯ ಜಿಲ್ಲೆಯ ಶೆಟ್ಟಿಹಳ್ಳಿ ರವಿಕುಮಾರ್, ಸಿ.ಆರ್.ತಿಮ್ಮಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬಾಗೇನಹಾಳು ಕೊಟ್ಟಬಸಪ್ಪ, ಆರ್.ಬಿ.ನಿಜಲಿಂಗಪ್ಪ, ತಿಮ್ಮಪ್ಪನಹಳ್ಳಿ ರಾಜಣ್ಣ, ಕೆ.ಎನ್. ಸಿದ್ದಮ್ಮ, ಲಕ್ಷ್ಮಿ, ಮಲ್ಲಾಪುರ ತಿಪ್ಪೇಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ, ಬಸ್ತಿಹಳ್ಳಿ ಸುರೇಶ್ ಬಾಬು, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT