ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕದೊಳಲು: ರಂಗನಾಥಸ್ವಾಮಿ ತೆಪ್ಪೋತ್ಸವ ಸಂಭ್ರಮ

40 ವರ್ಷಗಳ ಬಳಿಕ ನಡೆದ ತೆಪ್ಪೋತ್ಸವ
Last Updated 28 ನವೆಂಬರ್ 2021, 8:48 IST
ಅಕ್ಷರ ಗಾತ್ರ

ಹೊಳಲ್ಕೆರೆ: ಲೋಕದೊಳಲು ಬೆಟ್ಟದ ಮೇಲಿರುವ ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ದೇವಾಲಯಕ್ಕೆ ಮೆಟ್ಟಿಲು ನಿರ್ಮಿಸಲು ₹ 3 ಕೋಟಿ ಅನುದಾನ ನೀಡಲಾಗಿದ್ದು, ಒಂದು ವರ್ಷದ ಒಳಗೆ ಕಾಮಗಾರಿ ಮುಗಿಸಲಾಗುವುದು ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಲೋಕದೊಳಿನಲ್ಲಿ ಶನಿವಾರ ನಡೆದ ತೆಪ್ಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೊಡ್ಡಹೊಟ್ಟೆ ರಂಗನಾಥಸ್ವಾಮಿಗೆ ರಾಜ್ಯದಾದ್ಯಂತ ಲಕ್ಷಾಂತರ ಭಕ್ತರಿದ್ದಾರೆ. ನಾನು 2008ರಲ್ಲಿ ಶಾಸಕನಾದಾಗ ಮೊದಲ ಬಾರಿಗೆ ದೇವಾಲಯಕ್ಕೆ ಭೇಟಿ ನೀಡಿದ್ದೆ. ಆಗ ಭಕ್ತರು ಕಿರಿದಾದ ಮೆಟ್ಟಿಲುಗಳ ಮೂಲಕ ಕಡಿದಾದ ಬೆಟ್ಟ ಏರುವ ದೃಶ್ಯ ನೋಡಿದ್ದೆ. ಆಗಲೇ ಬೆಟ್ಟಕ್ಕೆ ಸುಸಜ್ಜಿತ ಮೆಟ್ಟಿಲು ನಿರ್ಮಿಸುವ ಆಲೋಚನೆ ಹೊಳೆದಿತ್ತು. ಆದರೆ ಆಗ ಮೆಟ್ಟಿಲು ನಿರ್ಮಿಸಲು ಆಗಲಿಲ್ಲ. 2019ರಲ್ಲಿ ಹೆಚ್ಚು ಮಳೆ ಬಂದು ದೇವಾಲಯದ ಸೇರಿ ಮೆಟ್ಟಿಲುಗಳು ಕುಸಿದು ಹೋದವು. ಆ ಸ್ಥಳ ನೋಡಿದ ಎಂಜಿನಿಯರ್‌ಗಳು ಕೂಡ ಇಲ್ಲಿ ಮೆಟ್ಟಿಲು ನಿರ್ಮಿಸುವುದು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದರು. ಅದನ್ನು ಸವಾಲಾಗಿ ಸ್ವೀಕರಿಸಿದ್ದು, ಈಗ ಕೆಲಸ ಆರಂಭಿಸಲಾಗಿದೆ. ಮೆಟ್ಟಿಲು ಪೂರ್ಣಗೊಳಿಸಲು ಎಷ್ಟು ಕೋಟಿ ಅನುದಾನವಾದರೂ ಕೊಡುತ್ತೇನೆ’ ಎಂದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ‘ಲೋಕದೊಳಲು ದೊಡ್ಡಹೊಟ್ಟೆ ರಂಗನಾಥ ಸ್ವಾಮಿ ಕ್ಷೇತ್ರ ಅತ್ಯಧಿಕ ಭಕ್ತರನ್ನು ಹೊಂದಿರುವ ಧಾರ್ಮಿಕ ಸ್ಥಳ. ನನ್ನ ಅವಧಿಯಲ್ಲಿ ಈ ಬೆಟ್ಟಕ್ಕೆ ಸುಸಜ್ಜಿತ ರಸ್ತೆ, ಸಮುದಾಯಭವನ ನಿರ್ಮಿಸಲು ₹ 10 ಕೋಟಿ ಅನುದಾನ ನೀಡಿದ್ದೆ’ ಎಂದರು.

ಕೆರೆಯಲ್ಲಿ ರಂಗನಾಥ ಸ್ವಾಮಿಯ ತೆಪ್ಪೋತ್ಸವ ನಡೆಯಿತು. ನೀರಿನ ಮೇಲೆ ತೇಲುವ ಅಲಂಕೃತ ಮಂಟಪದಲ್ಲಿ ದೇವರ ಮೂರ್ತಿಯ ಉತ್ಸವ ನಡೆಯಿತು. ಸಾವಿರಾರು ಭಕ್ತರು ತೆಪ್ಪೋತ್ಸವದ ದೃಶ್ಯ ಕಣ್ತುಂಬಿಕೊಂಡರು.

ಸೇವಾಟ್ರಸ್ಟ್ ಅಧ್ಯಕ್ಷ ಎಲ್.ಆರ್. ತಿಮ್ಮೇಶ್ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಶಾಸಕ ಎ.ವಿ.ಉಮಾಪತಿ, ಖನಿಜ ನಿಗಮದ ಅಧ್ಯಕ್ಷ ಲಿಂಗಮೂರ್ತಿ, ಎಲ್.ಬಿ. ರಾಜಶೇಖರ್, ಪುರಸಭೆ ಉಪಾಧ್ಯಕ್ಷ ಕೆ.ಸಿ.ರಮೇಶ್, ಮುರುಗೇಶ್, ಎಲ್.ಆರ್.ರಂಗಸ್ವಾಮಿ, ಶಿವಕುಮಾರ್, ತಹಶೀಲ್ದಾರ್ ರಮೇಶಾಚಾರಿ, ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತ ಜಗನ್ನಾಥ ಸಾಗರ್, ಕಂದಾಯ ಇಲಾಖೆಯ ನಿವೃತ್ತ ಪ್ರಾದೇಶಿಕ ಆಯುಕ್ತ ಜಿ.ಎಂ.ಧನಂಜಯ, ಉಮೇಶ್, ಪಿಎಸ್ಐ ವಿಶ್ವನಾಥ್, ಡಿ.ಸಿ.ಮೋಹನ್, ಅವಿನ್, ಮಂಜುನಾಥ್, ಸುನಿತಾ ಮೂರ್ತಿ, ಎಂ.ಲಕ್ಷ್ಮಣ, ಡಿ.ಜಯಣ್ಣ, ಗಿರೀಶ್ ನಾಡಿಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT