ಶುಕ್ರವಾರ, ಡಿಸೆಂಬರ್ 4, 2020
22 °C

ಚೆನ್ನಬಸವಣ್ಣ ಸುಜ್ಞಾನದ ಪ್ರಕಾಶ: ಶಿವಮೂರ್ತಿ ಮುರುಘಾ ಶರಣರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಚೆನ್ನಬಸವಣ್ಣ ಅವರದು ಜ್ಞಾನ ಪ್ರಕಾಶ. ಅವರ ಬದುಕಿನ ಮಹೋನ್ನತಿ ಎಂದರೆ ಸಮಾಜಕ್ಕೆ ಸುಜ್ಞಾನದ ಪ್ರಕಾಶ ಚೆಲ್ಲಿರುವುದು’ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾಮಠದಲ್ಲಿ ಭಾನುವಾರ ನಡೆದ ‘ಚೆನ್ನಬಸವಣ್ಣ’ ಅವರ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ಅವರು ಮಾತನಾಡಿದರು.

‘ಅನ್ನಮಯ, ಜ್ಞಾನಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳನ್ನು ಹೇಳಿದವರು ಚೆನ್ನಬಸವಣ್ಣ’ ಎಂದ ಅವರು, ‘ರುಚಿಯ ಜೊತೆ ಹೋದವರು ಸಾಧನೆ ಮಾಡಲಾರರು. ಆದರೆ, ಅಭಿರುಚಿಯ ಜೊತೆ ಸಾಗಿದಾಗ ಅಪ್ರತಿಮ ಸಾಧನೆಗೈಯಲು ಸಾಧ್ಯ ಎಂಬುದಕ್ಕೆ ಅಧಿಕ ಜ್ಞಾನಿಯಾದ ಇವರು ಮಾದರಿಯಾಗಿದ್ದಾರೆ’ ಎಂದರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕೆಇಬಿ ಷಣ್ಮುಖಪ್ಪ, ಬಸವರಾಜ ಕಟ್ಟಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು