ಹಿರಿಯೂರು: ತಾಲ್ಲೂಕಿನ ರಂಗೇನಹಳ್ಳಿಯಿಂದ ಚಳ್ಳಕೆರೆ ತಾಲ್ಲೂಕಿನ ಹುಲಿಕುಂಟೆ ಗ್ರಾಮಕ್ಕೆ ಹೋಗುವ ರಸ್ತೆಯನ್ನು ದುರಸ್ತಿ ಮಾಡಿಸಲು ಒತ್ತಾಯಿಸಿ ಭಾರತೀಯ ಕಿಸಾನ್ ಸಭಾ ನೇತತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸದರಿ ಮಾರ್ಗದಲ್ಲಿ ಸಾವಿರಾರು ರೈತರ ಹೊಲಗಳಿದ್ದು, ಬೆಳೆ ಕೊಯ್ಲಿಗೆ ಬಂದಿರುವ ಕಾರಣ ಜಮೀನುಗಳಿಗೆ ಹೋಗಿ ಬರಲು, ಕಟಾವು ಮಾಡಿದ ಧಾನ್ಯ ಸಾಗಿಸಲು ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲಿ ಟ್ರ್ಯಾಕ್ಟರ್ ಅಥವಾ ಎತ್ತಿನಬಂಡಿ ಸಂಚರಿಸುವುದು ದುಸ್ತರವಾಗಿದೆ. ಕೂಡಲೇ ರಸ್ತೆ ಸರಿಪಡಿಸಬೇಕು ಎಂದು ಮುಖಂಡರು ಆಗ್ರಹಿಸಿದರು.
ಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಗಡಾರಿ ಕೃಷ್ಣಪ್ಪ, ಆರ್.ಜಿ. ಮಂಜುನಾಥ್, ಗಂಗಣ್ಣ, ದಯಾನಂದ, ಮಹೇಂದ್ರ, ಮಧು, ತಿಮ್ಮಣ್ಣ, ಜಗನ್ನಾಥ್, ಕುಮ್ಮಿ, ರಾಜಣ್ಣ ಉಪಸ್ಥಿತರಿದ್ದರು.