7
ಶಾಪಗ್ರಸ್ಥ ಗ್ರಾಮಗಳಿಗೆ ಅನುಕೂಲ, ಆಂಜನೇಯ ನೀಡಿದ್ದ ಭರವಸೆ

ಹನುಮನಗುಡ್ಡ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಆಗ್ರಹ

Published:
Updated:
ಮೊಳಕಾಲ್ಮುರು ತಾಲ್ಲೂಕಿನ ಹನುಮನಗುಡ್ಡ ಮೂಲಕ ಹಾದು ಹೋಗಿರುವ ರಸ್ತೆ.

ಮೊಳಕಾಲ್ಮುರು: ಜಿಲ್ಲೆಯಲ್ಲಿ ಶಾಪಗ್ರಸ್ಥ ಗ್ರಾಮಗಳು ಎಂದು ಗುರುತಿಸಿಕೊಂಡಿರುವ ತಾಲ್ಲೂಕಿನ ಸಂತೇಗುಡ್ಡ ಗ್ರಾಮ ಪಂಚಾಯಿತಿ ಗ್ರಾಮಗಳಿಗೆ ಸಂಡೂರು ಭಾಗದಿಂದ ನೇರ ಸಂಪರ್ಕ ರಸ್ತೆ ನಿರ್ಮಿಸುವ ಭರವಸೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂಬ ಆರೋಪ ಕೇಳಿಬಂದಿದೆ.

ರಾಜಾಪುರ ಸಂಪರ್ಕ ರಸ್ತೆ ಮಾಡಿಕೊಡಬೇಕು. ಇದರಿಂದ ಸಂಡೂರು, ತೋರಣಗಲ್ಲು ಭಾಗಕ್ಕೆ ಹೋಗಲು ಅನುಕೂಲವಾಗಲಿದ್ದು, ಇಲ್ಲಿನ ಜನರು ಎಲ್ಲ ವಿಧದಲ್ಲೂ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ ಎಂದು 2 ವರ್ಷದ ಹಿಂದೆ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಹನುಮನಗುಡ್ಡದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ವೇಳೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದರು.

‘1 ಕಿಮೀ ದೂರದ ಈ ರಸ್ತೆ ಅರ್ಧ ಭಾಗದಷ್ಟು ಬಳ್ಳಾರಿ ಜಿಲ್ಲೆಯಲ್ಲಿ ಹಾದು ಹೋಗಿದ್ದು, ಈ ಹಿನ್ನೆಲೆಯಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಿ ಅತೀ ಶೀಘ್ರ ರಸ್ತೆ ನಿರ್ಮಿಸಿ ಕೊಡಬೇಕು ಆಂಜನೇಯ ಎಂದು ಖಡಕ್‌ ಸೂಚನೆ ನೀಡಿದ್ದರು. ನಂತರ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು ಬಿಟ್ಟರೆ ಯಾವುದೇ ಕೆಲಸ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರಾದ ಮಲ್ಲಯ್ಯ, ನಿಂಗರಾಜ್‌ ದೂರಿದರು.

‘ಶೈಕ್ಷಣಿಕ, ಸಾಮಾಜಿಕ, ಸಾರಿಗೆ ಸೇರಿ ಅನೇಕ ಸಮಸ್ಯೆಗಳು ಇಲ್ಲಿನ ಗ್ರಾಮಗಳ ಜನರು ಬಳ್ಳಾರಿಗೆ ಹೋಗಬೇಕಾದರೆ 20 ಕಿಮೀ ದೂರದ ರಾಂಪುರಕ್ಕೆ ಆಟೋದಲ್ಲಿ ಬಂದು ಪ್ರಯಾಣಿಸಬೇಕು. ಈ ಕಾರಣಕ್ಕಾಗಿ ಇಲ್ಲಿಗೆ ಅಧಿಕಾರಿಗಳು, ಶಿಕ್ಷಕರು, ಆರೋಗ್ಯ ಸಿಬ್ಬಂದಿ ಬರುತ್ತಿಲ್ಲ. ನೇರ ಸಂಪರ್ಕ ರಸ್ತೆ ಮಾಡಿದಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದು ಹೇಳಿದರು.

ಸಂಪರ್ಕ ರಸ್ತೆ ಖಾಸಗಿ ವ್ಯಕ್ತಿಯೊಬ್ಬರ ಜಮೀನು ಮೂಲಕ ಹಾದು ಹೋಗಲಿದ್ದು, ಜಮೀನು ಬಿಟ್ಟುಕೊಡಲು ಮಾಲೀಕರು ಒಪ್ಪಿದ್ದಾರೆ. ಶಾಸಕ ಶ್ರೀರಾಮುಲು ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಹನುಮಂತಪ್ಪ ಮನವಿ ಮಾಡಿದರು.

ಸಂಪರ್ಕ ರಸ್ತೆ ನಿರ್ಮಾಣ ಬಗ್ಗೆ ಕೆಡಿಪಿ ಸಭೆಯಲ್ಲಿ ಶ್ರೀರಾಮುಲು ಗಮನಕ್ಕೆ ತಂದು ನಿರ್ಮಾಣಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು.
- ಎಚ್‌.ಟಿ. ನಾಗರೆಡ್ಡಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !