80 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ₹350 ಕೋಟಿ: ಶಾಸಕ ಎಂ.ಚಂದ್ರಪ್ಪ

7
ರೂ 2 ಕೋಟಿ ವೆಚ್ಛದ ರಸ್ತೆ ಕಾಮಗಾರಿಗೆ ಚಾಲನೆ

80 ಹಳ್ಳಿಗಳಿಗೆ ಕುಡಿಯುವ ನೀರಿನ ಯೋಜನೆಗೆ ₹350 ಕೋಟಿ: ಶಾಸಕ ಎಂ.ಚಂದ್ರಪ್ಪ

Published:
Updated:
Deccan Herald

ಹೊಳಲ್ಕೆರೆ: ತಾಳ್ಯ ಹೋಬಳಿಯ 80 ಹಳ್ಳಿಗಳಿಗೆ ಶಾಂತಿಸಾಗರದಿಂದ ಕುಡಿಯುವ ನೀರು ಹರಿಸಲು ₹350 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿದ್ದು, ಶೀಘ್ರದಲ್ಲೇ ಚಾಲನೆ ಸಿಗಲಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲ್ಲೂಕಿನ ಗಿಲಿಕೇನಹಳ್ಳಿಯಲ್ಲಿ  ₹2 ಕೋಟಿ ವೆಚ್ಛದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಸೂಳೆಕರೆಯಿಂದ ಕುಡಿನೀರಕಟ್ಟೆ ಕೆರೆಗೆ ನೇರವಾಗಿ ನೀರು ಹರಿಸಲಾಗುವುದು. ಹನುಮಂತದೇವರ ಕಣಿವೆಯ ಪಕ್ಕದಲ್ಲಿರುವ ಹುಣಿಸೆಪಂಚೆ ಗುಡ್ಡದಲ್ಲಿ ಬೃಹತ್ ಟ್ಯಾಂಕ್ ನಿರ್ಮಿಸಿ, ಕುಡಿನೀರ ಕಟ್ಟೆ ಕೆರೆಯಿಂದ ನೀರು ಹರಿಸಲಾಗುವುದು. ಅಲ್ಲಿ ನೀರನ್ನು ಶುದ್ಧೀಕರಣಗೊಳಿಸಿ ತಾಳ್ಯ, ಎಚ್.ಡಿ. ಪುರ ಭಾಗದ ಹಳ್ಳಿಗಳಿಗೆ ಕುಡಿಯುವ ನೀರು ಹರಿಸಲಾಗುವುದು. ಇಲ್ಲಿಂದ ಮತ್ತೊಂದು ಮಾರ್ಗದಲ್ಲಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು’ಎಂದು ಹೇಳಿದರು

ತಾಲ್ಲೂಕಿನ ದುಮ್ಮಿ ಬೆಟ್ಟದ ಮೇಲೆ ಮತ್ತೊಂದು ಟ್ಯಾಂಕ್ ನಿರ್ಮಿಸಿ ಆ ಭಾಗದ ಸುಮಾರು 50ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರು ಹರಿಸಲಾಗುವುದು. ಹಂತ ಹಂತವಾಗಿ ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ನದಿ ನೀರು ಹರಿಸುವ ಗುರಿ ಇದೆ. ಹನುಮಂತದೇವರ ಕಣಿವೆಯಲ್ಲಿ ಇನ್ನೂ ಹೆಚ್ಚು ಶಾಲಾ ಕಾಲೇಜುಗಳನ್ನು ನಿರ್ಮಿಸಲಾಗುವುದು. ಕಣಿವೆಯಲ್ಲಿ 800 ಮನೆಗಳನ್ನು ಕಟ್ಟಿಸಿ ನವನಗರ ನಿರ್ಮಿಸಲಾಗುವುದು ಎಂದರು.

‘ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದಿದ್ದರೂ, ಅನುದಾನ ತರುವ ಮೂಲ ನನಗೆ ಗೊತ್ತಿದೆ. ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇದ್ದರೆ ನಮ್ಮ ಪಕ್ಷದ ಸರ್ಕಾರವೇ ಇರಬೇಕಿಂದಿಲ್ಲ. ದುರದೃಷ್ಟವಶಾತ್ ನಮಗೆ ಅಧಿಕಾರ ಕೈತಪ್ಪಿದೆ. ಬಿಜೆಪಿಯಿಂದ 104 ಶಾಸಕರು ಆಯ್ಕೆಯಾದರೂ ಕೇವಲ 5 ಸ್ಥಾನಗಳು ಕಡಿಮೆ ಆಗಿದ್ದರಿಂದ ಬಿ.ಎಸ್. ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಕೈತಪ್ಪಿತು. ಅಧಿಕಾರ ಶಾಶ್ವತ ಅಲ್ಲ. ಅಧಿಕಾರದಲ್ಲಿ ಇರುವವರೆಗೆ ಜನೋಪಯೋಗಿ ಕೆಲಸಗಳನ್ನು ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಲ್.ಬಿ. ರಾಜಶೇಖರ್, ಪಿ.ಎಂ.ಜಿ.ಎಸ್.ವೈ. ಸಹಾಯಕ ಎಂಜಿನಿಯರ್ ಟಿ. ತಿಮ್ಮಪ್ಪ, ವಕೀಲ ರಂಗಸ್ವಾಮಿ, ರಾಜಪ್ಪ, ಎಪಿಎಂಸಿ ಸದಸ್ಯ ರಮೇಶ್, ಈಶ್ವರಪ್ಪ, ರಾಮರಂಗಪ್ಪ, ಮಲ್ಲೇಶಪ್ಪ, ಗೋವಿಂದಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 4

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !