ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

7
- ತಹಶೀಲ್ದಾರ್ ಕಾಂತರಾಜ್

ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ಅಗತ್ಯ

Published:
Updated:
Deccan Herald

ನಾಯಕನಹಟ್ಟಿ: ಗಾಳಿಪಟ ಹಾರಿಸುವುದು ಅಪ್ಪಟ ಗ್ರಾಮೀಣ ಕ್ರೀಡೆಯಾಗಿದ್ದು, ಆಧುನಿಕತೆಯ ಭರಾಟೆಯಲ್ಲಿ ಇದು ಕಣ್ಮರೆಯಾಗುತ್ತಿದೆ ಎಂದು ತಹಶೀಲ್ದಾರ್ ಟಿ.ಸಿ. ಕಾಂತರಾಜ್ ವಿಷಾದಿಸಿದರು.

ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲೆ ಹಾಗೂ ಡಿ.ಸುಧಾಕರ್ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಪ್ರೆಸ್‌ಕ್ಲಬ್ ಚಳ್ಳಕೆರೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಸಹಯೋಗದೊಂದಿಗೆ ಶನಿವಾರ ನಡೆದ ಗಾಳಿಪಟ, ನಿಧಾನಗತಿಯ ಬೈಸಿಕಲ್ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗಾಳಿಪಟ ಹಾರಿಸುವುದರಿಂದ ಮನಸ್ಸಿಗೆ ಆಹ್ಲಾದ ದೊರೆಯುತ್ತದೆ. ಹಾಗಾಗಿ ನಗರ ಪ್ರದೇಶದಲ್ಲಿರುವ ಮಕ್ಕಳಿಗೆ ಪೋಷಕರು ಬಿಡುವಿನ ವೇಳೆಯಲ್ಲಿ ಗಾಳಿಪಟವನ್ನು ಹಾರಿಸಲು ಪ್ರೋತ್ಸಾಹ ನೀಡಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್. ವೆಂಕಟೇಶಪ್ಪ ಮಾತನಾಡಿದರು. ಶಿಕ್ಷಣ ಇಲಾಖೆಯ ಗಿರೀಶ್, ಎಲ್. ರುದ್ರಮುನಿ, ನಿರಂಜನಮೂರ್ತಿ, ಶ್ರೀನಿವಾಸ್‌ಮೂರ್ತಿ, ಧನಂಜಯ, ಮಂಜುನಾಥ, ಮಾಕಂಸ್ ಶ್ರೀನಿವಾಸ್, ಶಿರಸ್ತೆದಾರ್ ಟಿ. ಪ್ರಕಾಶ್, ಚಳ್ಳಕೆರೆ ಪ್ರೆಸ್‌ಕ್ಲಬ್ ಅಧ್ಯಕ್ಷ ಗೋಪನಹಳ್ಳಿ ಶಿವಣ್ಣ, ಉಪಾಧ್ಯಕ್ಷ ಡಿ.ಎಸ್. ನಾಗಭೂಷಣರಾವ್, ಕಾರ್ಯದರ್ಶಿ ರಾಮಾಂಜನೇಯ. ಬೆಳಗೆರೆ ಸುರೇಶ್ ಉಪಸ್ಥಿತರಿದ್ದರು.

ಗಾಳಿಪಟ ವಿಜೇತರು

ಪ್ರಥಮ - ಗೌಸ್‌ಪೀರ್, ಬಿಸಿನೀರು ಮುದ್ದಪ್ಪ ಪ್ರೌಢಶಾಲೆ,
ದ್ವೀತಿಯ - ಬಾಬುಪ್ರಸನ್ನ, ಸ್ವಾಮಿ ವಿವೇಕನಂದ ಪ್ರೌಢಶಾಲೆ,
ಅರ್ಜುನ್, ವಾಸವಿ ಪ್ರೌಢಶಾಲೆ.....?

ನಿಧಾನಗತಿಯ ಬೈಸಿಕಲ್ ಓಟ.

ಬಾಲಕಿಯರ ವಿಭಾಗ
ಪ್ರಥಮ - ಸೃಷಿ, ಹೆಗ್ಗೆರೆ ತಾಯಮ್ಮ ಪ್ರೌಢಶಾಲೆ.
ದ್ವಿತೀಯ - ಕೀರ್ತನ, ಜ್ಞಾನಧಾರ ಪ್ರೌಢಶಾಲೆ.
ತೃತೀಯ - ಭೂಮಿಕ, ಹೆಗ್ಗೆರೆ ತಾಯಮ್ಮ ಪ್ರೌಢಶಾಲೆ.

ಬಾಲಕರ ವಿಭಾಗ
ಪ್ರಥಮ - ತೌಸೀಪ್, ವಿದ್ಯಾಭಾರತಿ ಪ್ರೌಢಶಾಲೆ.
ದ್ವಿತೀಯ - ಕೀರ್ತಿಕುಮಾರ್, ಆದರ್ಶ ಪ್ರೌಢಶಾಲೆ.
ತೃತೀಯ - ಕುವೆಂಪು ಪ್ರೌಢಶಾಲೆ....?

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !