ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಶುರಾಂಪುರದಲ್ಲಿ ಹೆಚ್ಚಿನ ಬೆಲೆಗೆ ಅಡುಗೆ ಅನಿಲ ಸಿಲಿಂಡರ್‌ ಮಾರಾಟ

Last Updated 1 ಸೆಪ್ಟೆಂಬರ್ 2018, 17:11 IST
ಅಕ್ಷರ ಗಾತ್ರ

ಪರಶುರಾಂಪುರ:ಪರಶುರಾಂಪುರದಲ್ಲಿ ಒಂದು ಅಡುಗೆ ಅನಿಲ ಸಿಲಿಂಡರ್‌ ಖರೀದಿಸಲು ₹ 920 ರೂಪಾಯಿ ನೀಡಬೇಕಿದ್ದು, ರಸೀದಿಯನ್ನು ನೀಡುತ್ತಿಲ್ಲ ಎಂದು ಸಾರ್ವಜನಿಕರು ದೂರಿದರು.

ಪ್ರತಿ ತಿಂಗಳು ಅಡುಗೆ ಅನಿಲ ಸಿಲಿಂಡರ್ ಬೆಲೆ ಹೆಚ್ಚಿತ್ತಿದ್ದು, ಮೂಲ ಬೆಲೆ 836 ಇದೆ. ಆದರೆ, ₹ 920 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಜತೆಗೆ ರಸೀದಿ ನೀಡುತ್ತಿಲ್ಲ. ಕೇಳಿದರೆ ಹಾರಿಕೆ ಉತ್ತ ರ ನೀಡುತ್ತಾರೆ ಎಂದು ತಿಳಿಸಿದರು.

ಶನಿವಾರ ಸುಮಾರು 250 ಅಡುಗೆ ಅನಿಲ ಸಿಲೆಂಡರ್‌ ವಿತರಿಸಲಾಗಿದೆ. ಒಬ್ಬರಿಗೂ ರಸೀದಿ ನೀಡಿಲ್ಲ.

ಈ ಬಗ್ಗೆ ವಿಚಾರಿಸಿದರೆ ಕೇವಲ 73 ಮಂದಿ ಆನಲೈನ್ ನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಬುಕ್ ಮಾಡಿದ್ದಾರೆ. ಅವರಿಗೆ ಮಾತ್ರ ಬಿಲ್ ಬರುತ್ತದೆ. ಉಳಿದ 180ಕ್ಕೂ ಹೆಚ್ಚಿನ ಮಂದಿ ಆನಲೈನ್ ಬುಕ್ ಮಾಡಿಲ್ಲ. ಆದರೂ ಅವರಿಗೆ ಸಿಲಿಂಡರ್‌ ವಿತರಿಸುತ್ತಿದ್ದೇವೆ ಎಂದು ಎಸ್‌ಎಂ ಗ್ಯಾಸ್ ಡಿಸ್ಟ್ರಿಬ್ಯೂಟರ್ಸ್ ಸಿಬ್ಬಂದಿ ತಿಳಿಸಿದರು.

ಸಿಲಿಂಡರ್‌ ವಿತರಿಸುವ ಸಂದರ್ಭದಲ್ಲಿಯೇ ಕಡ್ಡಾಯವಾಗಿ ರಸೀದಿ ನೀಡಬೇಕು. ಖುದ್ದು ಪರಶುರಾಂಪುರದ ಅಡುಗೆ ಅನಿಲ ಸಿಲಿಂಡರ್‌ ಡಿಸ್ಟ್ರೀಬ್ಯೂಟರ್ ಆಫೀಸ್‌ಗೆ ಭೇಟಿ ನೀಡಿ ಪರೀಶಿಲಿಸುತ್ತೇನೆ ಎನ್ನುತ್ತಾರೆ ಚಳ್ಳಕೆರೆ ಆಹಾರ ನಿರೀಕ್ಷಕ ರಂಗಸ್ವಾಮಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT