ಸೋಮವಾರ, ನವೆಂಬರ್ 29, 2021
20 °C
ಎಚ್. ಕಾಂತರಾಜ್ ಹೇಳಿಕೆ

ಜಾತಿಗಣತಿ ವರದಿಯಿಂದ ಸಮಸಮಾಜ ಕನಸು ನನಸು: ಎಚ್. ಕಾಂತರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದಲ್ಲಿ ಮಾಡಿಸಿರುವ ಜಾತಿ ಮತ್ತು ಸಾಮಾಜಿಕ ಗಣತಿ ವರದಿಯಿಂದ ಸಮಾಜದ ಎಲ್ಲಾ ಜಾತಿಗಳ ಶೋಷಿತರಿಗೆ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಎಚ್. ಕಾಂತರಾಜ್ ಹೇಳಿದರು.

ತಾಲ್ಲೂಕಿನ ಕೊಂಡ್ಲಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವರದಿಯಲ್ಲಿ ಪ್ರತಿಯೊಂದು ಜಾತಿಯ ಸ್ಥಿತಿಗತಿ, ವೃತ್ತಿ, ಪ್ರವೃತ್ತಿ, ಆರ್ಥಿಕ, ಶೈಕ್ಷಣಿಕ ಮಟ್ಟವನ್ನು ದಾಖಲಿಸಲಾಗಿದೆ. ಸುಮಾರು 1.60 ಲಕ್ಷ ಶಿಕ್ಷಕರು ಈ ಕಾರ್ಯ ಮಾಡಿದ್ದು, ಜನರ ಸಮ್ಮತಿ ಪಡೆದು ಅಂತಿಮವಾಗಿ ಅಂಶಗಳನ್ನು ದಾಖಲಿಸಲಾಗಿದೆ. 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿ ಜತೆಯಲ್ಲಿ ಅವರ ಸ್ಥಿತಿಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.

‘ನನ್ನ ಅವಧಿ ಮುಕ್ತಾಯವಾದಾಗ ಜಾತಿ ಗಣತಿ ವರದಿಯನ್ನು ಆಯೋಗದ ಸದಸ್ಯ ಕಾರ್ಯದರ್ಶಿ ಅವರಿಗೆ ಒಪ್ಪಿಸಲಾಗಿತ್ತು. ಇಷ್ಟು ಮಾತ್ರ ಆಯೋಗದ ಕೆಲಸ. ಸದಸ್ಯ ಕಾರ್ಯದರ್ಶಿ ಸರ್ಕಾರದ ವ್ಯಕ್ತಿಯಾಗಿರುತ್ತಾರೆ. ವರದಿ ಯಾವ ಸರ್ಕಾರ ಮಾಡಿಸಿತು, ಯಾವ ಸರ್ಕಾರ ಜಾರಿ ಮಾಡಿತು ಎನ್ನುವುದಕ್ಕಿಂತ ಮುಖ್ಯ ವರದಿಯಲ್ಲಿ ಯಾವ ಅಂಶಗಳಿವೆ, ಇದರಿಂದ ಸಮಾಜಕ್ಕೆ ಅನುಕೂಲವಾಗುತ್ತದೆಯೋ ಇಲ್ಲವೋ ಎಂಬುದನ್ನು ಮಾತ್ರ ಪರಿಗಣಿಸಬೇಕು’ ಎಂದು ಕಾಂತರಾಜ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು