ಬುಧವಾರ, ನವೆಂಬರ್ 13, 2019
24 °C

ಸತ್ತ ಈರಣ್ಣ ಮರಳಿ ಬಂದ ಕಥೆ

Published:
Updated:

ಚಳ್ಳಕೆರೆ: ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯನ್ನು ಮಣ್ಣು ಮಾಡಿದ ನೆನಪುಗಳೂ ಅಸ್ಪಷ್ಟವಾಗಿವೆ. ಪತಿಯ ಅಕಾಲಿಕ ಮರಣದಿಂದ ಕೊರಗಿ ವೃದ್ಧಾಪ್ಯ ತಲುಪಿದ ಪತ್ನಿಯ ಜೀವನದಲ್ಲಿ ಮತ್ತೆ ಇನಿಯನ ಪ್ರವೇಶವಾಗಿದೆ. ನಾಲ್ಕೂವರೆ ದಶಕಗಳ ಬಳಿಕ ಮರಳಿದ ಪತಿಯನ್ನು ಈರಜ್ಜಿ ಅಚ್ಚರಿಯಿಂದಲೇ ಸ್ವೀಕರಿಸಲು ಮುಂದಾಗಿದ್ದಾರೆ.

ಮೃತ ವ್ಯಕ್ತಿಯೊಬ್ಬರು ಮರಳಿ ಬಂದ ಪ್ರಕರಣವೊಂದು ಚಳ್ಳಕೆರೆ ತಾಲ್ಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಕಾಡುಗೊಲ್ಲ ಬುಡಕಟ್ಟು ಸಮುದಾಯದ ಈರಣ್ಣ (72) ಮರಳಿ ಬಂದ ವ್ಯಕ್ತಿ. ಅಂತ್ಯಸಂಸ್ಕಾರ ಮಾಡಿದ್ದ ಗ್ರಾಮಸ್ಥರೇ ಈರಣ್ಣನನ್ನು ಗುರುತಿಸುತ್ತಿದ್ದಾರೆ. ಸಮಾಧಿಯಾದ ವ್ಯಕ್ತಿ ಬದುಕಿ ಬಂದಿದ್ದು ಹೇಗೆ ಎಂಬ ಜಿಜ್ಞಾಸೆ ಮಾತ್ರ ಕುಟುಂಬವನ್ನು ಕಾಡುತ್ತಿದೆ.

ಚಿತ್ರನಾಯಕನಹಳ್ಳಿಯ ಈರಣ್ಣ ಹಾಗೂ ದಾಸರಹಳ್ಳಿಯ ಈರಜ್ಜಿ 50 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರು ಜನಿಸಿದ್ದರು. ತೋಟದಲ್ಲಿ ಕೂಲಿ ಮಾಡಿ ದಂಪತಿ ಜೀವನ ಕಟ್ಟಿಕೊಂಡಿದ್ದರು. ಇದ್ದಕ್ಕಿದ್ದಂತೆ ಈರಣ್ಣ ಅಕಾಲಿಕ ಮರಣಕ್ಕೆ ತುತ್ತಾಗಿದ್ದರು. ಇವರ ಅಂತ್ಯಸಂಸ್ಕಾರ ಶಾಸ್ತ್ರೋಕ್ತವಾಗಿ ನೆರವೇರಿತ್ತು.

ಪ್ರತಿಕ್ರಿಯಿಸಿ (+)