ಹೊಸದುರ್ಗ: ಸಾಣೇಹಳ್ಳಿಯಿಂದ ಸಂತೇಬೆನ್ನೂರುವರೆಗೆ ಜ. 27, 28, 29 ಹಾಗೂ 30ವರೆಗೆ ನಾಲ್ಕು ದಿನಗಳ ಕಾಲ ‘ಸರ್ವೋದಯದೆಡೆಗೆ ನಮ್ಮ ನಡಿಗೆ’ ಪಾದಯಾತ್ರೆ ನಡೆಸಲಾಗುವುದು ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿನ ಎಸ್.ಎಸ್.ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಪರಿಸರ, ಕೃಷಿ, ಆರೋಗ್ಯ, ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸುಧಾರಣೆ ತರಬೇಕಾಗಿದೆ. ಐದು ಕ್ಷೇತ್ರಗಳಲ್ಲಿ ಜಾಗೃತಿ ಮೂಡಿಸುವ ಸದಾಶಯ ಸರ್ವೋದಯ ಸಂಘಟಕರಾಗಿದ್ದಾಗಿದೆ. ಇದಕ್ಕೆ ಗಾಂಧೀಜಿ ಅವರ ಉಪ್ಪಿನ ಸತ್ಯಾಗ್ರಹ ಪಾದಯಾತ್ರೆ ನಮಗೆ ದಿಕ್ಸೂಚಿಯಾಗಿದೆ. ಹಾಗಾಗಿ ಸಾಂಕೇತಿಕವಾಗಿ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಿಂದ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನವರೆಗೆ ಪಾದಯಾತ್ರೆಯನ್ನು ಏರ್ಪಡಿಸಲಾಗಿದೆ’ ಎಂದು ಹೇಳಿದರು.

ಪಾದಯಾತ್ರೆಯಲ್ಲಿ ನಾಡಿನ ಮಠಾಧೀಶರು, ಚಿಂತಕರು, ರಾಜಕಾರಣಿಗಳು, ಸಾಹಿತಿಗಳು, ಶಿಕ್ಷಣತಜ್ಞರು, ಪರಿಸರ ಪ್ರೇಮಿಗಳು ಭಾಗವಹಿಸುವರು. ಪಾದಯಾತ್ರೆ ಸಂಚಲನವನ್ನುಂಟು ಮಾಡುವುದು ಮುಖ್ಯವಲ್ಲ; ಕಾರ್ಯಕಾರಿಯಾಗಬೇಕು’ ಎಂದು ಪಂಡಿತಾರಾಧ್ಯ ಶ್ರೀ ಹೇಳಿದರು.

‘ಸರ್ವೋದಯ ಎಂದರೆ ಬಸವಣ್ಣನವರು ಹೇಳುವಂತೆ ಸಕಲ ಜೀವಾತ್ಮರ ಒಳಿತು ಬಯಸುವುದು. ಸರ್ವರ ಉನ್ನತಿಯೇ ಸರ್ವೋದಯ. ಇಂದಿನ ಸಮಾಜದಲ್ಲಿ ಕೋಮುಗಲಭೆ, ಹಿಂಸೆ, ಲಿಂಗ ತಾರತಮ್ಯ, ಅಸಮಾನತೆ, ಭ್ರಷ್ಟಾಚಾರ, ಪರಿಸರ ಮಾಲಿನ್ಯ, ಅನಾರೋಗ್ಯ, ಕನ್ನಡದ ಉಳಿವು– ಅಳಿವು ಇಂಥ ಅನೇಕ ಪಿಡುಗುಗಳು ಅತಿಯಾಗಿ ಮಾನವರ ಬದುಕು ನರಕಮಯವಾಗುತ್ತಿದೆ’ ಎಂದು ಸ್ವಾಮೀಜಿ ಹೇಳಿದರು.

‘ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಇರುವ ಸುವರ್ಣ ಮಾರ್ಗವೆಂದರೆ ಸರ್ವೋದಯ ತತ್ವಗಳನ್ನು ಜಾರಿಯಲ್ಲಿ ತರುವ ಸಂಕಲ್ಪ ತಳೆಯುವುದು. ಇದಕ್ಕೆ ಬೇಕಾದುದು ಪ್ರೀತಿ, ಕರುಣೆ, ಸ್ವಾತಂತ್ರ್ಯ, ಸಮಾನತೆ, ಸರಳತೆ ಇಂಥ ಹಲವು ಮೌಲ್ಯಗಳು. ಅವುಗಳನ್ನು ಬಳಕೆ ಮಾಡಿಕೊಂಡು ಹದಗೆಟ್ಟಿರುವ, ಹದಗೆಡುತ್ತಿರುವ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಬೇಕಾಗಿದೆ. ಇದಕ್ಕೆ ಮುಖ್ಯವಾಗಿ ಅರಿವು ಆಧಾರಿತ ಸಾಮೂಹಿಕ ಚಿಂತನೆ ಮತ್ತು ಕಾರ್ಯಾಚರಣೆಯ ಅಗತ್ಯವಿದೆ’ ಎಂದು ಪಂಡಿತಾರಾಧ್ಯ ಶ್ರೀಗಳು ಅಭಿಪ್ರಾಯಪಟ್ಟರು.

‘ನಮ್ಮ ನಡಿಗೆ ಸರ್ವೋದಯದೆಡೆಗೆ ಈ ಘೋಷವಾಕ್ಯ ಇನ್ನಿಟ್ಟುಕೊಂಡಿರುವ ಉದ್ದೇಶ ಇಡೀ ಸಮಾಜಕ್ಕೆ ಸಂಚಲನವನ್ನುಂಟು ಮಾಡುವುದು. ಪಾದಯಾತ್ರೆ ಸರ್ಕಾರದ ವಿರುದ್ಧವೂ ಅಲ್ಲ; ಪರವೂ ಅಲ್ಲ. ಇದರ ಉದ್ದೇಶ ಅರಿವು ಮೂಡಿಸುವುದು. ಪ್ರತಿಯೊಂದು ಕ್ಷೇತ್ರಗಳು ಸುಧಾರಣೆಯಾದಾಗಲೇ ಅಂದುಕೊಂಡ ಗುರಿ ಮುಟ್ಟಲಿಕ್ಕೆ ಸಾಧ್ಯ’ ಎಂದು ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ ಹೇಳಿದರು.

ಮಾಜಿ ಶಾಸಕರಾದ ಮಹಿಮಾ ಪಾಟೀಲ್, ಡಿ.ಎಸ್.ಸುರೇಶ್, ಮಾಡಾಳ್ ವಿರೂಪಾಕ್ಷಪ್ಪ, ಗಣ್ಯರಾದ ಎ.ಸಿ. ಚಂದ್ರಪ್ಪ, ಪಾಂಡೋಮಟ್ಟಿಯ ಲೋಕಣ್ಣ, ಗಾಯಕ ನಾಗರಾಜ್ ಎಚ್.ಎಸ್, ಶಿವನಕೆರೆ ಬಸವಲಿಂಗಪ್ಪ, ಎಸ್.ಆರ್. ಚಂದ್ರಶೇಖರಯ್ಯ, ರಾಜು ಸೇರಿ ಸುತ್ತಲಿನ ಗ್ರಾಮಸ್ಥರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.