ಹಿರಿಯೂರು: ಮೈಸೂರಿನ ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಿದ್ದು, ಮಾರಿಕಣಿವೆ ಸಮೀಪ ವಾಣಿವಿಲಾಸ ಅಣೆಕಟ್ಟೆ ನಿರ್ಮಿಸಿದ್ದು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್. ಆದರೆ ಕೆಲವು ಚಲನಚಿತ್ರಗಳಲ್ಲಿ, ಜನರ ಆಡುಮಾತುಗಳಲ್ಲಿ ವಿಶ್ವೇಶ್ವರಯ್ಯನವರು ಎಂಬ ಮಾತು ಕೇಳಿ ಬರುತ್ತಿರುವುದು ಬೇಸರದ ಸಂಗತಿ ಎಂದು ಸಂಸ್ಕೃತಿ ಚಿಂತಕ ಎಸ್.ಜಿ. ಸಿದ್ದರಾಮಯ್ಯ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಸಬಾ ಹೋಬಳಿ ಘಟಕ ಶನಿವಾರ ರಾತ್ರಿ ಆಯೋಜಿಸಿದ್ದ ಕಸಬಾ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

‘ಯಾರೇ ಆಗಲಿ ತಿಳಿದೋ ತಿಳಿಯದೆಯೋ ಇತಿಹಾಸ ತಿರುಚುವ ಕೆಲಸ ಮಾಡಬಾರದು. ಅದು ಸಾಧಕರಿಗೆ ಎಸಗುವ ದೊಡ್ಡ ಅವಮಾನ. ಎಚ್. ವಿ. ನಂಜುಂಡಯ್ಯ ಅವರ ಶ್ರಮದಿಂದ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವ ಅಂಗಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಆರಂಭವಾಯಿತು. ಈ ನಾಡಿನ ನೆಲ, ಜಲ, ಭಾಷೆ, ಸಂಪತ್ತು, ಪರಂಪರೆಯನ್ನು ಕಾಪಾಡುವ ಜವಾಬ್ದಾರಿ, ಹೊಣೆಗಾರಿಕೆ ಸಾಹಿತ್ಯ ಪರಿಷತ್ತಿಗೆ ಇದೆ. ಆದರೆ ಅಂತಹ ಮಹತ್ತರ ಕೆಲಸ ಕಾರ್ಯಗಳು ನಡೆಯದಿರುವುದು ವಿಷಾದದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗಾಗಿ ಹೋರಾಟಗಳು ಆರಂಭವಾಗಿ 35 ವರ್ಷಗಳು ಕಳೆದರೂ ಕಾಮಗಾರಿಗಳು ಇಂದಿಗೂ ಮುಗಿಯದಿರುವುದು ಆಳುವ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯನ್ನು ಎತ್ತಿ ತೋರಿಸುತ್ತದೆ. ಕನ್ನಡದ ಹೋರಾಟವೆಂದರೆ ಜನರೇ ಇರುವುದಿಲ್ಲ. ಚಲನಚಿತ್ರ, ಧಾರಾವಾಹಿ ನಟ–ನಟಿಯರು ಬರುತ್ತಾರೆಂದರೆ ಸಾಲುಸಾಲಾಗಿ ಬರುತ್ತಾರೆ. ಜನರಲ್ಲಿ ಇಂದಿಗೂ ಪ್ರಜ್ಞಾವಂತಿಕೆಯ ಕೊರತೆ ಇದೆ. ಸಾಹಿತ್ಯ, ಸಂಗೀತ, ನಾಟಕ ಎಂದರೆ ದೂರ ಸರಿಯುತ್ತಾರೆ’ ಎಂದು ಆದಿ ಜಾಂಬವ ಅಭಿವೃದ್ಧಿ ನಿಗಮದ ರಾಜ್ಯ ಘಟಕದ ಅಧ್ಯಕ್ಷ ಜಿ.ಎಸ್. ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

‘ಅನ್ಯ ಭಾಷಿಕರನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಸಂಸ್ಕಾರ ಹೊಂದಿರುವ ವಿಶ್ವದ ಏಕೈಕ ಭಾಷೆ ಕನ್ನಡ. ಈ ಭಾಷೆಯಿಂದ ಮಾತ್ರ ನಮ್ಮ ಸಂಕಟ, ವೇದನೆ, ದುಃಖ, ದುಮ್ಮಾನಗಳನ್ನು ಹೇಳಿಕೊಳ್ಳಲು ಸಾಧ್ಯ. ತಾಯಿ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸಲು ಇಂತಹ ಸಾಹಿತ್ಯ ಸಮ್ಮೇಳನಗಳು ಅಗತ್ಯ’ ಎಂದು ಚಿತ್ರದುರ್ಗ ಕಲಾ ಕಾಲೇಜಿನ ಪ್ರಾಂಶುಪಾಲ ಜೆ. ಕರಿಯಪ್ಪ ಮಾಳಿಗೆ ಹೇಳಿದರು.

ಶಿರಾ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಚಂದ್ರಯ್ಯ ಬೆಳವಾಡಿ ಮಾತನಾಡಿದರು. ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ. ರಘು. ಒಕ್ಕಲಿಗರ ಸಂಘದ ದಂತ ಮಹಾವಿದ್ಯಾಲಯದ ಅಧ್ಯಕ್ಷ ಜೆ.ರಾಜು ಬೇತೂರುಪಾಳ್ಯ, ಎಂ.ಡಿ ಸಣ್ಣಪ್ಪ, ಎಚ್. ತಿಪ್ಪೇಸ್ವಾಮಿ, ಎನ್. ಹನುಮಂತರಾಯಪ್ಪ, ಚಿತ್ರ ನಟರಾದ ರಾಜೇಶ್ ನಟರಂಗ, ಸಾಹಿತ್ಯ ಪರಿಷತ್ ಕಸಬಾ ಹೋಬಳಿ ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಪ್ರಸನ್ನ, ಕಾರ್ಯದರ್ಶಿ ಅಸ್ಗರ್ ಅಹ್ಮದ್, ಎಸ್.ಜಿ. ರಂಗಸ್ವಾಮಿ ಸಕ್ಕರ, ಕೆ.ಸಿ. ಹೊರಕೇರಪ್ಪ, ಕಸವನಹಳ್ಳಿ ರಮೇಶ್, ಟಿ. ಕೃಷ್ಣಮೂರ್ತಿ, ಪಿ. ಆರ್. ದಾಸ್, ಜಿ. ಎಲ್. ಮೂರ್ತಿ, ಕಲ್ಲಟ್ಟಿ ಹರೀಶ್, ನವೀನ್ ಮಸ್ಕಲ್, ತಿಮ್ಮಣ್ಣ, ಮ್ಯಾಕ್ಲೂರಹಳ್ಳಿ ರಂಗಯ್ಯ, ಇ. ಜಿ .ಎಸ್. ಗೋವಿಂದಪ್ಪ, ಅಶೋಕ್, ಗಡಾರಿ ಕೃಷ್ಣಪ್ಪ, ಪದ್ಮನಾಥ್, ಮಹೇಶ್, ಉಮಾಶಂಕರ್, ನಂದವರಿಕ್, ವಿಜಯ್, ಶಿವಣ್ಣ, ಮಹೇಶ್, ಎಂ. ರವೀಂದ್ರನಾಥ್, ಎಂ. ಕಿರಣ್ ಮಿರಜ್ಕರ್, ಪ್ರವೀಣ್ ಬೆಳಗೆರೆ, ಅನಿತಾ ಉಪಸ್ಥಿತರಿದ್ದರು.

ಅನಿತಾ ಕೆ. ಗೋವಿಂದ ಅವರ ‘ಹೆಣ್ಣು ಆಬಲೇ ಅಲ್ಲ’, ಪ್ರವೀಣ್ ಬೆಳಗೆರೆಯವರ ‘ಮರ ಮಾತನಾಡಿದಾಗ ’ಕವನ ಸಂಕಲನಗಳನ್ನು ಬಿಡುಗಡೆ ಮಾಡಲಾಯಿತು. ನಂತರ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ನಡೆಯಿತು.

‘ಕೋಮುವಾದವನ್ನು ಎಳೆಯದರಲ್ಲೇ ಚಿವುಟಬೇಕಿದೆ’

ಜಾಗತೀಕರಣ ಉದಾರೀಕರಣ ನಾಗರೀಕರಣ ಕಂಪ್ಯೂಟರೀಕರಣ ಎಐ ತಂತ್ರಜ್ಞಾನ ಗಣಿಗಾರಿಕೆಯಂತಹ ಉದ್ಯಮಿಗಳ ಪರವಾದ ಸರ್ಕಾರದ ನಿಲುವುಗಳು ಸಮಾಜವನ್ನು ಛಿದ್ರಗೊಳಿಸುತ್ತಿವೆ ಎಂದು ಕಸಬಾ ಹೋಬಳಿ ಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಜಿ.ಡಿ. ಚಿತ್ತಣ್ಣ ಆತಂಕ ವ್ಯಕ್ತಪಡಿಸಿದರು. ಸಮ್ಮೇಳನದಲ್ಲಿ ಅವರು ಅಧ್ಯಕ್ಷೀಯ ಭಾಷಣ ಮಾಡಿದರು.

‘ಕೋಮುವಾದ ಭಯೋತ್ಪಾದನೆಯ ಚಿಂತನೆಗಳನ್ನು ಎಳೆಯದರಲ್ಲಿಯೇ ಚಿವುಟಿ ಹಾಕಬೇಕು. ಇಲ್ಲದಿದ್ದರೆ ಸಮಾಜ ಸಮಾಧಿಯಾಗುವ ಅಪಾಯವಿದೆ. ನಮ್ಮದು ಕುವೆಂಪು ಹೇಳುವ ಮನುಜ ಮತ ವಿಶ್ವಪಥದ ಮಾರ್ಗವಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡ ಶಾಲೆಗಳನ್ನು ಮುಚ್ಚಬಾರದು. ಅಗತ್ಯ ಸೌಲಭ್ಯ ಕಲ್ಪಿಸಿ ಮಕ್ಕಳು ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗುವಂತೆ ಯೋಜನೆ ರೂಪಿಸಬೇಕು. ವಾಣಿವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ ಪುನಾರಂಭ ಮಾಡಬೇಕು. ನಗರದಲ್ಲಿ ಕನ್ನಡ ಭವನ ನಿರ್ಮಿಸಬೇಕು. ತಾಲ್ಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸಬೇಕು. ನಗರದಲ್ಲಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂದು ಚಿತ್ತಯ್ಯ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.