ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಮೂರು ದಿನ ಶರಣ ಸಂಸ್ಕೃತಿ ಉತ್ಸವ

ಅ.6ರಂದು ಶೂನ್ಯಪೀಠಾರೋಹಣ, ಸರಳ ಆಚರಣೆಗೆ ತೀರ್ಮಾನ
Last Updated 25 ಸೆಪ್ಟೆಂಬರ್ 2022, 4:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಶರಣ ಸಂಸ್ಕೃತಿ ಉತ್ಸವವನ್ನು ಅ.4ರಿಂದ 6ರವರೆಗೆ ಸರಳವಾಗಿ ಹಮ್ಮಿಕೊಳ್ಳಲಾಗಿದೆ. ಅ.4ರಂದು ಉತ್ಸವ ಉದ್ಘಾಟನೆಯಾಗಲಿದ್ದು, ಅ.6ರಂದು ಶೂನ್ಯಪೀಠಾರೋಹಣ ನೆರವೇರಲಿದೆ.

ಶರಣ ಸಂಸ್ಕೃತಿ ಉತ್ಸವಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಪ್ರಭಾರ ಪೀಠಾಧಿಪತಿ ಮಹಾಂತ ರುದ್ರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಶನಿವಾರ ಪೂರ್ವಸಿದ್ಧತಾ ಸಭೆ ನಡೆದಿದೆ.

‘ಸೆ.28ರಿಂದ 9ದಿನಗಳವರೆಗೆ ವಿವಿಧ ಮಠಾಧೀಶರಿಂದ ಕರ್ತೃಗದ್ದುಗೆಗೆ ವಚನಾಭಿಷೇಕ ನಡೆಯಲಿದೆ. ಅ.4ರಿಂದ 6ರವೆರೆಗೆ ಮೂರುದಿನ ಶರಣ ಸಂಸ್ಕೃತಿ ಉತ್ಸವವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಅ.5ರಂದು ಸಾಮೂಹಿಕ ಕಲ್ಯಾಣ ಹಾಗೂ ಕೋಟೆಯೊಳಗಿನ ಮುರುಘಾಮಠದಲ್ಲಿ ರಾಜಭಕ್ತಿ ಸಮರ್ಪಣೆ ನಡೆಯಲಿದೆ. ಅ. 6ರಂದು ಶೂನ್ಯಪೀಠಾರೋಹಣ, ಬಸವೇಶ್ವರರ ಭಾವಚಿತ್ರ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

ಉತ್ಸವ ಸಮಿತಿಯ ಗೌರವಾಧ್ಯಕ್ಷ ಬಸವಕುಮಾರ ಸ್ವಾಮೀಜಿ, ‘ಮುರುಘಾ ಮಠದಲ್ಲಿ ಜಾತ್ಯತೀತವಾಗಿ ಅನ್ನ, ಅಕ್ಷರ ದಾಸೋಹ ನಿರಂತರವಾಗಿ ನಡೆದುಕೊಂಡು ಬಂದಿದೆ. ಮುರುಘಾ ಮಠಕ್ಕೆ ಚಾರಿತ್ರಿಕ ಪರಂಪರೆ, ಇತಿಹಾಸವಿದೆ. ಮಠದ ಸೇವೆ ನಿರಂತರವಾಗಿ ನಡೆಯಲಿದೆ. ಹಸಿದು ಬಂದವರಿಗೆ ಮುರುಘಾ ಮಠ ದಾಸೋಹ ಸೇವೆ ಮಾಡುತ್ತ ಬಂದಿದೆ’ ಎಂದು ಹೇಳಿದರು.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಮಾಚಿದೇವ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಬಸವಶಾಂತಲಿಂಗ ಸ್ವಾಮೀಜಿ, ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಸವನಿರಂಜನ ಸ್ವಾಮೀಜಿ, ಇಮ್ಮಡಿ ಬಸವ ಕೇತೇಶ್ವರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ವಿಧಾನಪರಿಷತ್‌ ಸದಸ್ಯ ಕೆ.ಎಸ್. ನವೀನ್ ಅವರೂ ಈ ಸಂದರ್ಭದಲ್ಲಿ ಇದ್ದರು.

**.

ಪೀಠ ಮತ್ತು ಪರಂಪರೆಗೆ ಧಕ್ಕೆಯಾಗದ ರೀತಿಯಲ್ಲಿ ಉತ್ಸವ ಆಯೋಜಿಸಲಾಗಿದೆ. ಉತ್ಸವ ಸರಳ ರೂಪದಲ್ಲಿ ನಡೆಯಲಿದೆ. ಪೂಜಾವಿಧಾನಗಳು ಎಂದಿನಂತೆ ನಡೆಯಲಿವೆ.

-ಎಸ್. ಲಿಂಗಮೂರ್ತಿ, ಉತ್ಸವ ಸಮಿತಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT