ಶಿವನಾರದಮುನಿಸ್ವಾಮಿ ದಾಸೋಹ ಕಾರ್ಯಕ್ರಮ

7

ಶಿವನಾರದಮುನಿಸ್ವಾಮಿ ದಾಸೋಹ ಕಾರ್ಯಕ್ರಮ

Published:
Updated:
Deccan Herald

ಸಿರಿಗೆರೆ: ಭಾರತ ಧಾರ್ಮಿಕ ಪರಂಪರೆಯನ್ನು ಹೊಂದಿದ ಸುಸಂಸ್ಕ್ಕತಿಯ ದೇಶ. ತನ್ನದೇ ಆದ ಧಾರ್ಮಿಕ ಆಚರಣೆಗಳು, ವ್ರತಗಳು ನಡೆಯುತ್ತವೆ. ಈ ಮೂಲಕ ಜನರಲ್ಲಿ ಬಾಂಧವ್ಯ ಬೆಸೆಯುತ್ತವೆ ಎಂದು ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಶ್ರೀ ಶಿವನಾರದಮುನಿಸ್ವಾಮಿ ದೇಗುಲದ ಆವರಣದಲ್ಲಿ ಶ್ರಾವಣ ಮಾಸ ಅಂಗವಾಗಿ ಆಯೋಜಿಸಿದ್ದ ದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ನಮ್ಮ ಪೂರ್ವಜರು ದಿನ ನಿತ್ಯದ ಕೆಲಸಕ್ಕೆ ಬಿಡುವು ನೀಡುವ ಜೊತೆಗೆ ಎಲ್ಲ ಕಸುಬಿನವರಿಗೂ ಹುಮ್ಮಸ್ಸು ಹೆಚ್ಚಿ ಮತ್ತೆ ಕಾರ್ಯಪ್ರವೃತ್ತರಾಗಲು ಪ್ರೇರಣೆ ನೀಡುವಂತಾಗಲಿ ಎಂದು ಹಬ್ಬಗಳನ್ನು ಆಚರಿಸುತ್ತಿದ್ದರು. ಆಯಾ ಕಾಲಮಾನಕ್ಕೆ ಪರಿಸರಕ್ಕೆ ತಕ್ಕಂತೆ ಹಬ್ಬಗಳನ್ನು ಯೋಜಿಸಿರುವುದು ವೈಜ್ಞಾನಿಕವಾಗಿಯೂ ಕೂಡ ಮಹತ್ವದ್ದಾಗಿದೆ. ಶ್ರಾವಣ ಮಾಸ ಹಬ್ಬಗಳ ಮಾಸ ಎಂದು ಹೇಳಿದರು.

ಸಿರಿಗೆರೆ, ಜಮ್ಮೇನಹಳ್ಳಿ, ಕೋಣನೂರು, ಚಿಕ್ಕೇನಹಳ್ಳಿ, ಹಳವುದರ, ಓಬವ್ವನಾಗ್ತಿಹಳ್ಳಿ, ಚಿಕ್ಕಾಲಘಟ್ಟ, ರಂಗಾಪುರ ಗ್ರಾಮಗಳಿಂದ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

ಚಿಕ್ಕೇನಹಳ್ಳಿಯ ಭಕ್ತರು ದೇವರ ಪುಷ್ಪಾಲಂಕಾರ ಮತ್ತು ಅಭಿಷೇಕ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಸುತ್ತಮುತ್ತಲ ಭಕ್ತರು ಅಕ್ಕಿ, ಬೆಲ್ಲ, ಕಾಳು, ತರಕಾರಿ, ಬಾಳೆಹಣ್ಣುಗಳನ್ನು ಸಮರ್ಪಿಸಿದರು.

ದೇಗುಲದಲ್ಲಿ ಶುಕ್ರವಾರ ರಾತ್ರಿಯಿಂದಲೇ ಭಜನೆ ಕಾರ್ಯಕ್ರಮ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !