ಸಿರಿಗೆರೆ: ‘ಡಿ.ಎಂ.ಎಫ್ ನಿಧಿಯಡಿ ₹ 8 ಕೋಟಿ ವೆಚ್ಚದಲ್ಲಿ ಎರಡು ತಿಂಗಳ ಹಿಂದಷ್ಟೇ ನಿರ್ಮಾಣಗೊಂಡಿದ್ದ ಕಾಂಕ್ರೀಟ್ ರಸ್ತೆ ಕಳಪೆಯಾಗಿದೆ’ ಎಂದು ಕರುನಾಡು ರಾಷ್ಟ್ರೀಯ ಹೋರಾಟ ಸಮಿತಿ ಆರೋಪಿಸಿದೆ.

‘ಜಿಲ್ಲಾ ಮುಖ್ಯ ರಸ್ತೆಯಿಂದ ದೊಡ್ಡಿಗನಾಳ್–ಹೊಸಹಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಕಳಪೆಯಾಗಿದೆ. ರಸ್ತೆಯ ಉದ್ದಕ್ಕೂ ಬಿರುಕು ಕಾಣಿಸಿಕೊಂಡಿವೆ. ಕೆಲವೆಡೆ ರಸ್ತೆ ಕಿತ್ತು ಬಂದಿದ್ದು, ನಿರ್ಮಾಣಕ್ಕೆ ಬಳಸಲಾಗಿರುವ ಕಾಂಕ್ರಿಟ್ನ ಗುಣಮಟ್ಟವನ್ನು ತೋರಿಸುತ್ತಿದೆ’ ಎಂದು ದೂರಿದರು.

‘ಈಗ ತಾನೆ ಮಳೆಗಾಲ ಆರಂಭವಾಗುತ್ತಿದೆ. ಭಾರಿ ಮಳೆಯಾದರೆ ರಸ್ತೆ ಸಂಪೂರ್ಣವಾಗಿ ಹಾಳಾಗಿ ಹೋಗುತ್ತದೆ’ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.

‘ಬೆಂಗಳೂರಿನ ಗುತ್ತಿಗೆದಾರರು ಈ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಅವರಿಂದಲೇ ಈ ಕಾಮಗಾರಿಯನ್ನು ಮರು ನಿರ್ಮಾಣ ಮಾಡಿಸಬೇಕು’ ಎಂದು ಒತ್ತಾಯಿಸಿದರು.

‘ಬೃಹತ್ ವಾಹನಗಳು ಚಲಿಸಿದರೆ ರಸ್ತೆಗಳು ಹಾಳಾಗುವುದು ಸಹಜ. ದೊಡ್ಡಿಗನಾಳ್ ಗ್ರಾಮದಲ್ಲೂ ಈ ರೀತಿಯೇ ಆಗಿದೆ’ ಎಂದು ಈ ರಸ್ತೆಯ ಮೇಲ್ವಿಚಾರಣೆ ನಡೆಸಿರುವ ಎಂಜಿನಿಯರ್ ಮೊಹಮ್ಮದ್ ರಫೀಕ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-44-705044187

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.