ಸಿರಿಗೆರೆ: ಪಟ್ಟಣದ ಗ್ರಾಮದೇವತೆ ಕಲ್ಲೇಶ್ವರ ಸ್ವಾಮಿಯ ಕೆಂಡದ ಉತ್ಸವ ಶುಕ್ರವಾರ ನಡೆಯಿತು.

ದೇವರನ್ನು ಪ್ರತಿಷ್ಠಾಪಿಸಿದ ಪಲ್ಲಕ್ಕಿಯನ್ನು ಹೊತ್ತ ಭಕ್ತರು ವಾಡಿಕೆಯಂತೆ ಮೂರು ಬಾರಿ ಕೆಂಡದ ಗುಂಡಿಯನ್ನು ಹಾಯುತ್ತಿದ್ದರು. ಆದರೆ, ಈ ವರ್ಷ ಸುಡು ಬಿಸಿಲಿನ ಕಾರಣದಿಂದಾಗಿ ಒಮ್ಮೆ ಮಾತ್ರವೇ ಕೆಂಡದ ಗುಂಡಿ ಹಾಯ್ದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.

ಹೊಳೆ ಪೂಜೆಯನ್ನು ಮುಗಿಸಿ ಮಡಿಯಲ್ಲಿ ವೀರಭದ್ರ ಮತ್ತು ಕಲ್ಲೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಕೆಂಡೋತ್ಸವಕ್ಕೆ ತರಲಾಯಿತು. ಆ ವೇಳೆಯಲ್ಲಿ ಭಂಡಾರ ಹೊತ್ತ ಮಹಿಳೆಯರು ಭಾಗಿಯಾಗಿದ್ದರು.

ಹೊಳೆಪೂಜೆ ಮೆರವಣಿಗೆ ಯಲ್ಲಿ ದಾವಣಗೆರೆ ಜಿಲ್ಲೆ ಹದಡಿ ಮತ್ತು ಹರಿಹರದ ಪುರವಂತಿಕೆ ಹಾಗೂ ಸಮಾಳದ ಕಲಾವಿದರು ಭಾಗಿಯಾಗಿದ್ದರು.

ರಥೋತ್ಸವ ಇಂದು: ಕಲ್ಲೇಶ್ವರ ಸ್ವಾಮಿ ರಥೋತ್ಸವ ಶನಿವಾರ ಸಂಜೆ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-44-1146625314

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.