ಸಿರಿಗೆರೆ: ಪಡಿತರ ವಿತರಿಸಲು ಎದುರಾಗಿರುವ ಸರ್ವರ್ ಸಮಸ್ಯೆಗೆ ಸಿರಿಗೆರೆ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘವು ಪರಿಹಾರ ಕಂಡುಕೊಂಡಿದೆ. ಬಿ.ಪಿ.ಎಲ್. ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ ಅಂದಾಜು 580 ಕಾರ್ಡ್ದಾರರ ನೋಂದಣಿ ಇರುವ ಸಹಕಾರ ಸಂಘವು ಶುಕ್ರವಾರ ರಾತ್ರಿ 9.45ರವರೆಗೂ ಕಾರ್ಡ್ದಾರರಿಗೆ ಪಡಿತರ ವಿತರಣೆ ಮಾಡಿದೆ.

ಸಹಕಾರ ಸಂಘದ ಮುಂದೆ ನೂರಾರು ಮೋಟಾರ್ ಸೈಕಲ್ಗಳು, ಪಡಿತರ ಹೊತ್ತೊಯ್ಯುವ ಕೈಗಾಡಿಗಳು ಸಾಲುಗಟ್ಟಿ ನಿಂತಿದ್ದವು. ಬೆರಳಚ್ಚು ನೀಡಲು ನೂರಾರು ಕಾರ್ಡ್ದಾರರು ಸರದಿಯಲ್ಲಿ ನಿಂತಿದ್ದರು.

‘ಎರಡು ದಿನ ಹಗಲು ವೇಳೆಯಲ್ಲಿ ಸರ್ವರ್ ಸಮಸ್ಯೆ ಇದ್ದುದರಿಂದ ರಾತ್ರಿಯೂ ಸಹ ಪಡಿತರ ವಿತರಿಸಲು ಸಹಕಾರ ಸಂಘದ ಅಧಿಕಾರಿಗಳು ಮುಂದಾಗಿದ್ದಾರೆ’ ಎಂದು ಗ್ರಾಹಕರೊಬ್ಬರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-44-340735701

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.