ಸಿರಿಗೆರೆ: ‘ದೇವರ ಬಗೆಗೆ ತಿಳಿಯಲು ವ್ಯಕ್ತಿಯು ಮನಸ್ಸಿನಲ್ಲಿ ಪರಿಶುದ್ಧತೆ ಕಾಪಾಡಿಕೊಳ್ಳಬೇಕು’ ಎಂದು ತರಳಬಾಳು ಮಠದ ಶಿವಮೂರ್ತಿ ಸ್ವಾಮೀಜಿ ತಿಳಿಸಿದರು.

ಭರಮಸಾಗರ ಸಮೀಪದ ಕೋಡಿರಂಗವ್ವನಹಳ್ಳಿ ಗ್ರಾಮದಲ್ಲಿ ಓಂಕಾರ ಹುಚ್ಚನಾಗಲಿಂಗಸ್ವಾಮಿಯ ದೇವಾಲಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಮನುಷ್ಯನ ಜೀವನದಲ್ಲಿ ಭಕ್ತಿ ಮತ್ತು ನಂಬಿಕೆಗಳು ಅತ್ಯಂತ ಮಹತ್ವದ ಸ್ಥಾನ ಪಡೆದಿವೆ. ಬಸವೇಶ್ವರರು ಪ್ರತಿಪಾದಿಸಿದ ಸಂದೇಶಗಳು ಇಂದಿಗೂ ಸಮಕಾಲೀನವಾಗಿಯೇ ಉಳಿದಿವೆ’ ಎಂದರು.

‘ಕೌಟುಂಬಿಕ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಇಂದಿನ ಕಾನೂನು ಮತ್ತು ವ್ಯವಸ್ಥೆಗಳು ಸಂಪೂರ್ಣ ಸಹಕಾರಿಯಾಗಿಲ್ಲ. ಜನರಲ್ಲಿನ ಧರ್ಮನಿಷ್ಠೆ ಮತ್ತು ನಂಬಿಕೆ ಇನ್ನೂ ಜೀವಂತವಾಗಿದೆ. ಮನುಷ್ಯ ತಾನು ಅಳವಡಿಸಿಕೊಂಡಿರುವ ಜೀವನ ಮೌಲ್ಯಗಳನ್ನು ಪಾಲಿಸಿ ಅದರಂತೆ ನಡೆಯಬೇಕು’ ಎಂದರು.

ಬುಧವಾರ ರಾತ್ರಿ ನೂತನ ಪ್ರತಿಷ್ಠಾಪನಾ ಮೂರ್ತಿಗಳ ಆಗಮನದೊಂದಿಗೆ ಗಣಪತಿ ಪೂಜೆ, ಗಂಗಾ ಪೂಜೆ ಮತ್ತು ಗೋ ಪೂಜೆ ನೆರವೇರಿದವು. ನಂತರ ನೂತನ ಈಶ್ವರ, ಬಸವಣ್ಣ ದೇವಾಲಯದ ಗೃಹಪ್ರವೇಶ ನಡೆಯಿತು. ಈಶ್ವರ ಮತ್ತು ಬಸವಣ್ಣ ಮೂರ್ತಿಗಳಿಗೆ ಕಂಕಣ, ಮಹಾರುದ್ರಾಭಿಷೇಕ, ಪ್ರಾಣ ಪ್ರತಿಷ್ಠಾಪನೆ ಪೂಜೆ ಹಾಗೂ ಅಷ್ಟೋತ್ತರ ಮಹಾಮಂಗಳಾರತಿ ನೆರವೇರಿತು. ನವಗ್ರಹ ಹೋಮ, ತೀರ್ಥ ಪ್ರಸಾದ ವಿತರಣೆ ಕಾರ್ಯಕ್ರಮ, ರಾತ್ರಿ ಬಸಾಪುರದ ಬಸವಕಲಾ ಲೋಕ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಿತು.

ಗುರುವಾರ ಬಸವೇಶ್ವರ, ವಿಘ್ನೇಶ್ವರ ಹಾಗೂ ಪಾರ್ವತಿ ವಿಗ್ರಹಗಳ ಅಷ್ಟಬಂಧ ಪ್ರತಿಷ್ಠಾಪನೆ ಮತ್ತು ಕಳಶ ಪ್ರತಿಷ್ಠಾಪನೆ ಮಹೋತ್ಸವ ಹಾಗೂ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ನಡೆಯಿತು.

ಹೊನ್ನಾಳಿ ತಾಲ್ಲೂಕಿನ ಮಾಸಡಿ ಗ್ರಾಮದ ಎಂ.ಕೆ.ಉಮೇಶಆಚಾರ್ ಹಾಗೂ ಮಹಾವಿಷ್ಣು ನಾಯಕ್ ಶಿಲ್ಪಿಗಳನ್ನು ಸನ್ಮಾನಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-44-201899675

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.