ಸೇವಾ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶ

7
ನ್ಯಾಕ್ ಸಲಹೆಗಾರ ಡಾ.ಸಿ.ಎಸ್.ವಿಷ್ಣುಕಾಂತ್ ಚಟಪಲ್ಲಿ

ಸೇವಾ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶ

Published:
Updated:
Deccan Herald

ಚಿತ್ರದುರ್ಗ: ಸೇವಾ ಕ್ಷೇತ್ರದಲ್ಲಿ ವಿಪುಲ ಉದ್ಯೋಗಾವಕಾಶಗಳಿವೆ. ಆದರೆ, ಕೌಶಲ ಹೊಂದಿದ ಪದವೀಧರರು ಸಿಗುತ್ತಿಲ್ಲ ಎಂದು ನ್ಯಾಕ್ ಸಲಹೆಗಾರ ಡಾ.ಸಿ.ಎಸ್.ವಿಷ್ಣುಕಾಂತ್ ಚಟಪಲ್ಲಿ ಬೇಸರ ವ್ಯಕ್ತಪಡಿಸಿದರು.

ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಉದ್ಯೋಗಶೀಲತಾಭಿವೃದ್ಧಿ ವಿಭಾಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಸ್ವಯಂ ಉದ್ಯೋಗ ಮತ್ತು ಸೌಖ್ಯ ಜೀವನ ಸೌಲಭ್ಯ’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಕಂಪ್ಯೂಟರ್‌ ಜ್ಞಾನ ಇಲ್ಲದವರನ್ನು ಅನಕ್ಷರಸ್ಥರೆಂದು ಗುರುತಿಸಲಾಗುತ್ತಿದೆ. ಕಂಪ್ಯೂಟರ್‌ ಆಧಾರಿತ ಕೌಶಲ ಇಲ್ಲದವರಿಗೆ ಉದ್ಯೋಗ ಸಿಗುವುದು ಅನುಮಾನ. ಬದಲಾದ ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳು ತಿಳುವಳಿಕೆ ಹೊಂದಿರಬೇಕು’ ಎಂದು ಸಲಹೆ ನೀಡಿದರು.

‘ಜ್ಞಾನಾಧಾರಿತ ಶಿಕ್ಷಣಕ್ಕಿಂತ ಕೌಶಲಭರಿತ ವಿದ್ಯೆ ನೀಡುವತ್ತ ಬೋಧಕರು ಗಮನ ಹರಿಸಬೇಕು. ತಂತ್ರಜ್ಞಾನ ಆಧಾರಿತ ಉದ್ಯೋಗದಲ್ಲಿನ ಸವಾಲನ್ನು ಎದುರಿಸುವ ಸ್ವಭಾವ ಹಾಗೂ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಸೃಜನಶೀಲ ಸಂವಹನ ಕಲೆ ಹಾಗೂ ನಾಯಕತ್ವ ಗುಣಗಳನ್ನು ಹೊಂದಿದ್ದರೆ ಉದ್ಯೋಗ ಸುಲಭವಾಗಿ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಜಿ.ಎನ್‌.ಮಲ್ಲಿಕಾರ್ಜುನಪ್ಪ, ‘ಶಿಕ್ಷಣವು ಜೀವನೋಪಾಯಕ್ಕೆ ದಾರಿ ಕಲ್ಪಿಸುವ ಸೇತುವೆಯಾಗಿದೆ. ಆದರ್ಶ ಹಾಗೂ ಯಶಸ್ವಿ ವ್ಯಕ್ತಿಗಳ ಸಾಧನೆಗಳನ್ನು ಪರಿಚಯಿಸಿ ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿದವರಿಗೆ ಸರ್ಕಾರ ಕೂಡ ನೆರವು ನೀಡುತ್ತಿದೆ’ ಎಂದು ಹೇಳಿದರು.

ಪ್ರಾಚಾರ್ಯ ಡಾ.ಬಿ.ಸಿ.ಶಾಂತಪ್ಪ, ನ್ಯಾಕ್‌ ಸಹಾಯಕ ಸಲಹೆಗಾರ ವಿಷ್ಣು ಮಹೇಶ್, ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಈ.ಚಿತ್ರಶೇಖರ್, ಎಸ್‌ಜೆಎಂ ಪಾಲಿಟೆಕ್ನಿಕ್‌ ಕಾಲೇಜು ಪ್ರಾಂಶುಪಾಲ ಟಿ.ವಿ.ವಿರೂಪಾಕ್ಷಪ್ಪ, ಎಸ್‌ಜೆಎಂ ಐಟಿಐ ಕಾಲೇಜು ಪ್ರಾಂಶುಪಾಲ ಬೋರೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !