ಬುಧವಾರ, ಅಕ್ಟೋಬರ್ 21, 2020
21 °C

ಹೊಸದುರ್ಗದಲ್ಲಿ ಬಿರುಸಿನ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ಪಟ್ಟಣದಲ್ಲಿ ಶನಿವಾರ ಬಿರುಸಿನ ಮಳೆ ಸುರಿಯಿತು.

ಹದ ಮಳೆಗೆ ಮುಖ್ಯರಸ್ತೆ ಬದಿಯ ತಗ್ಗು, ಗುಂಡಿ, ಚರಂಡಿಗಳಲ್ಲಿ ನೀರು ಹರಿಯಿತು. ಇಲ್ಲಿನ ಕೋಟೆ ಭಾಗದ ಮರಕಟ್ಟೆ ಹಾಗೂ ನಂಜಯ್ಯನಕೆರೆಗೆ ನೀರು ಹರಿದು ಬಂದಿದೆ.

ಶುಕ್ರವಾರ ರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಬಿರುಸಿನ ಮಳೆಗೆ ತಾಲ್ಲೂಕಿನ ಕಂಗುವಳ್ಳಿ ರಾಧಮ್ಮ, ಕಾರೇಹಳ್ಳಿ ಗ್ರಾಮದ ಕರಿಯಪ್ಪ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಎರಡು ಮನೆಗಳಿಂದ ₹ 40 ಸಾವಿರ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಡದಕೆರೆ, ಮತ್ತೋಡು ಹೋಬಳಿಯ ಕೆಲವೆಡೆ ಬಿರುಸಿನ ಮಳೆಯಾಗಿದೆ. ಹಿರೇಹಳ್ಳ ಮತ್ತೆ ತುಂಬಿ ಹರಿಯುತ್ತಿದೆ. ಈ ಹಳ್ಳದ ವ್ಯಾಪ್ತಿಯಲ್ಲಿ ಇರುವ ಚೆಕ್‌ಡ್ಯಾಂ, ಬ್ಯಾರೇಜ್‌ಗಳು ತುಂಬಿ ಹರಿಯುತ್ತಿದ್ದು, ಮೀನು ಪ್ರಿಯರಿಂದ ಶಿಕಾರಿ ನಡೆಯಿತು. ಮಳೆ ಇಲ್ಲದೇ ಬಾಡಿದ್ದ ರಾಗಿ ಬೆಳೆಗೆ ಜೀವಕಳೆ ಬಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.