ಬೆಲಗೂರು ಗ್ರಾಮದ ಮುಖ್ಯರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಕೆಲವೊಮ್ಮೆ ಹತ್ತಾರು ಬೀದಿ ನಾಯಿಗಳು ಗುಂಪು ಗುಂಪಾಗಿ ಅಡ್ಡಾಡುತ್ತಿರುತ್ತವೆ. ನಾಯಿಗಳಿಗೆ ಹೆದರಿ ಮಕ್ಕಳನ್ನು ಹೊರಗೆ ಆಟವಾಡಲು ಕಳುಹಿಸುವುದಕ್ಕೂ ಪಾಲಕರು ಭಯಪಡುತ್ತಿದ್ದಾರೆ. ವಾಹನ ಸವಾರರಿಗೆ ನಾಯಿಗಳು ಬೆನ್ನುಹತ್ತುತ್ತವೆ. ನಾಯಿಗಳು ಅಡ್ಡಬಂದು ವಾಹನ ಸವಾರರು ಬಿದ್ದು ಕೈಕಾಲು ಪೆಟ್ಟು ಮಾಡಿಕೊಂಡ ನಿದರ್ಶನಗಳೂ ಇವೆ.