ಗಾಂಧಿ ಜಯಂತಿ: ಕಸ ಗುಡಿಸಿದ ಡಿ.ಸಿ, ನ್ಯಾಯಾಧೀಶ

7

ಗಾಂಧಿ ಜಯಂತಿ: ಕಸ ಗುಡಿಸಿದ ಡಿ.ಸಿ, ನ್ಯಾಯಾಧೀಶ

Published:
Updated:
Deccan Herald

ಚಿತ್ರದುರ್ಗ: ಕಾರು ಏರುವುದಕ್ಕೂ ಸಹಾಯಕರ ನೆರವು ಪಡೆಯಬಹುದಾದ ಸೌಲಭ್ಯ ಹೊಂದಿರುವ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ರಸ್ತೆ ಬದಿಯಲ್ಲಿ ಗುಡ್ಡೆ ಹಾಕಿದ ಕಸವನ್ನು ಬುಟ್ಟಿಗೆ ತುಂಬಿದರು. ಕೋರ್ಟ್‌ಹಾಲ್‌ನಲ್ಲಿ ಸದಾ ಗಂಭೀರವಾಗಿರುವ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಬಿ.ವಸ್ತ್ರಮಠ ಕಸದ ಬುಟ್ಟಿಯನ್ನು ಎತ್ತಿ ಸಾಗಿಸಿದರು.

ಗಾಂಧಿ ಜಯಂತಿಯ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸ್ವಚ್ಛತೆಯೇ ಸೇವೆ’ ಅಭಿಯಾನದಲ್ಲಿ ಉನ್ನತ ಅಧಿಕಾರಿಗಳೇ ಬೀದಿಗೆ ಇಳಿದಿದ್ದು ಸಾರ್ವಜನಿಕರ ಹುಬ್ಬೇರಿಸಿತು. ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದರು.

ಕಂದಾಯ, ಪಂಚಾಯತ್‌ ರಾಜ್‌ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ 6.30ಕ್ಕೆ ಜಿಲ್ಲಾಸ್ಪತ್ರೆ ಆವರಣದಲ್ಲಿ ಹಾಜರಿದ್ದರು. ನ್ಯಾಯಾಧೀಶರು ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಸ್ವಚ್ಛತಾ ಸಲಕರಣೆಗಳನ್ನು ಹಿಡಿದು ನಾಲ್ಕು ದಿಕ್ಕಿಗೂ ಹೊರಟರು. ಅಲ್ಲಲ್ಲಿ ಬಿದ್ದಿದ್ದ ಕಸವನ್ನು ಎತ್ತಿ ನಗರಸಭೆಯ ಟ್ರ್ಯಾಕ್ಟರ್‌ಗಳಿಗೆ ತುಂಬಿದರು.

ಮುಖಗವಸು, ಕೈಗವಸು ಹಾಕಿಕೊಂಡು ಕಳೆ ಗಿಡಗಳನ್ನು ಕಟಾವು ಮಾಡಿದರು. ರಾಶಿ ಬಿದ್ದಿದ್ದ ತ್ಯಾಜ್ಯವನ್ನು ವಾಹನಕ್ಕೆ ತುಂಬಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌.ರವೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್‌ ಮಲ್ಲಿಕಾರ್ಜುನ, ಪೌರಾಯುಕ್ತ ಚಂದ್ರಪ್ಪ ಸೇರಿ ಎಲ್ಲ ಇಲಾಖೆಯ ಹಿರಿಯ ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !