ಮಂಗಳವಾರ, ಜನವರಿ 26, 2021
22 °C

ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಲಂಚದ ಬೇಡಿಕೆ ಮತ್ತು ಪಡೆದ ಆರೋಪದ ಮೇರೆಗೆ ಮೊಳಕಾಲ್ಮುರು ತಹಶೀಲ್ದಾರ್ ಮಲ್ಲಿಕಾರ್ಜುನ ಹಾಗೂ ಕೋನಸಾಗರ ಪಿರ್ಕ ಗ್ರಾಮಲೆಕ್ಕಾಧಿಕಾರಿ ಉಮೇಶ್ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಹಶೀಲ್ದಾರ್ ಸೂಚನೆ ಮೇರೆಗೆ ಉಮೇಶ್ ಪಂಚಾಕ್ಷರಿ ಬಿ. ರಾಥೋಡ್ ಎಂಬುವವರಿಂದ ₹ 2ಲಕ್ಷ ಲಂಚ ಪಡೆಯುತ್ತಿದ್ದಾಗ ಎಸಿಬಿ ಡಿವೈಎಸ್‌ಪಿ ಎಚ್.ಎಸ್. ಪರಮೇಶ್ವರಪ್ಪ, ಇನ್‌ಸ್ಪೆಕ್ಟರ್‌ ಚೈತನ್ಯ ನೇತೃತ್ವದ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

‘ಚಳ್ಳಕೆರೆಯಿಂದ ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಮಾರ್ಗದ ಅಭಿವೃದ್ಧಿ ಸಂಬಂಧ ದಿಲೀಪ್‌ ಬಿಲ್ಡ್‌ಕಾನ್‌ ಗುತ್ತಿಗೆ ಪಡೆದಿದೆ. ಸರ್ಕಾರಿ ಜಾಗದಲ್ಲಿ ಮಣ್ಣು ತೆಗೆಯಲು ಎನ್‌ಒಸಿ ಪಡೆಯಬೇಕು. ಅದಕ್ಕಾಗಿ ಗುತ್ತಿಗೆದಾರರು ಮೊಳಕಾಲ್ಮುರು ತಹಶೀಲ್ದಾರ್ ಬಳಿ ಬಂದಾಗ ₹ 15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ದೂರು ದಾಖಲಾಗಿದೆ’ ಎಂದು ಎಸಿಬಿ ದಾವಣಗೆರೆ ಪೂರ್ವವಲಯದ ಎಸ್‌ಪಿ ಜಯಪ್ರಕಾಶ್ ತಿಳಿಸಿದ್ದಾರೆ.

‘ಲಂಚದ ಹಣಕ್ಕಾಗಿ ಪ್ರೀತಮ್ ಎಂಬುವವರನ್ನು ತಹಶೀಲ್ದಾರ್ ಪದೇ ಪದೇ ಪೀಡಿಸಿದ್ದಾರೆ. ₹ 15 ಲಕ್ಷದಲ್ಲಿ ₹ 8 ಲಕ್ಷವನ್ನು ಈಗಾಗಲೇ ಪಡೆದಿದ್ದಾರೆ. ಉಳಿದ ₹ 7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ ₹ 2 ಲಕ್ಷ ತಹಶೀಲ್ದಾರ್ ಪರವಾಗಿ ಪಡೆಯುವ ವೇಳೆ ಉಮೇಶ್‌ ಸಿಕ್ಕಿಬಿದ್ದಿದ್ದಾರೆ. ತನಿಖೆ ಮುಂದುವರಿದಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು