ಸೋಮವಾರ, ಜುಲೈ 4, 2022
24 °C

ಸಿಡಿಲು ಬಡಿದು ಹಸುಗಳು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕನಹಟ್ಟಿ: ತಳಕು ಹೋಬಳಿಯ ಲಂಬಾಣಿಹಟ್ಟಿ ಗ್ರಾಮದಲ್ಲಿ ಸೋಮವಾರ ರಾತ್ರಿ ಸಿಡಿಲು ಬಡಿದು ಎರಡು ಹಸುಗಳು ಮೃತಪಟ್ಟಿವೆ.

ತಳಕು ಗ್ರಾಮದ ಸಮೀಪದ ಲಂಬಾಣಿಹಟ್ಟಿ ಸರ್ವೆ ನಂ–139ರಲ್ಲಿರುವ ಹೊಲದಲ್ಲಿನ ಗುಡಿಸಲಿನಲ್ಲಿ ರೈತ ಮಹಿಳೆ ಗೌರಿಬಾಯಿ ಹಾಗೂ ಅವರ ಪುತ್ರ ವಾಸವಾಗಿದ್ದರು. ದಿನವಿಡೀ ಹಸುಗಳನ್ನು ಮೇಯಿಸಿ ಸಂಜೆ ಹೊಲದಲ್ಲಿರುವ ಹುಣಸೇ ಮರದ ಕೆಳಗೆ ಕಟ್ಟಿದ್ದರು. ರಾತ್ರಿ ಸಿಡಿಲು ಬಡಿದಿದೆ.

ಸಿಡಿಲಿನ ರಭಸಕ್ಕೆ ಹುಣಸೆ ಮರ ಸುಟ್ಟಿದೆ.

ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಗೌರಿಬಾಯಿ ತಮ್ಮ ಹಸುಗಳು ಮೃತಪಟ್ಟಿರುವುದರಿಂದ ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಳಕು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.