ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಚಿತ್ರರಂಗದ ಸ್ವರೂಪ ಬದಲಾಗಿದೆ: ಚಿತ್ರನಟ ಶಶಿಕುಮಾರ್ ಹೇಳಿಕೆ

Last Updated 3 ಫೆಬ್ರುವರಿ 2022, 3:30 IST
ಅಕ್ಷರ ಗಾತ್ರ

ಮೊಳಕಾಲ್ಮುರು:ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದಲ್ಲಿ ಈಗ ಕನ್ನಡ ಚಿತ್ರರಂಗದಲ್ಲಿ ಹಲವು ವಿಷಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಚಿತ್ರನಟಶಶಿಕುಮಾರ್ ಹೇಳಿದರು.

ಗುರುಭವನದಲ್ಲಿ ಮಂಗಳವಾರ ಸರ್ಜಿ ಆಡಿಯೊ ಹಮ್ಮಿಕೊಂಡಿದ್ದ ಸಂಗೀತ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.

‘ಸದಭಿರುಚಿ, ಬೇಡಿಕೆ, ಗುಣಮಟ್ಟ, ಪ್ರೇಕ್ಷಕರ ಸ್ಪಂದನ ಸೇರಿಚಿತ್ರರಂಗದಲ್ಲಿ ಅನೇಕ ಬದಲಾವಣೆಗಳು ಆಗಿವೆ. ನಾನು 30 ವರ್ಷದಿಂದಚಿತ್ರರಂಗದಲ್ಲಿದ್ದು, ಇದರಆಗುಹೋಗುಗಳನ್ನು ಗಮನಿಸಿದ್ದೇನೆ’ ಎಂದು ಹೇಳಿದರು.

‘ಕಾಲಕ್ಕೆ ತಕ್ಕಂತೆ ಚಿತ್ರಗಳ ಆಯ್ಕೆ ಮಾಡಿಕೊಂಡು ಮುನ್ನಡೆಯುತ್ತಿದ್ದೇನೆ. ಹಿಂದೆ ನಾನು ವರ್ಷಕ್ಕೆ
15 ಚಿತ್ರಗಳಲ್ಲಿ ನಟಿಸುತ್ತಿದ್ದೆ. ಈಗಲೂ ನನ್ನ ಕೈಯಲ್ಲಿ ಸಾಕಷ್ಟು ಚಿತ್ರಗಳಿವೆ. ಕಲೆ ಯಾರ ಸ್ವತ್ತು ಅಲ್ಲ. ಅದು ಕಲಾವಿದನಿಗೆ ಸೇರಿದ್ದು,ಅರ್ಹರು ಪ್ರಯತ್ನಪಟ್ಟರೆ ಬೆಳೆಯುವುದು ಕಷ್ಟವಲ್ಲ’ಎಂದುಸಲಹೆ ನೀಡಿದರು.

ಸರ್ಕಲ್ ಇನ್‌ಸ್ಪೆಕ್ಟರ್ ಜಿ.ಬಿ.ಉಮೇಶ್, ಸಿದ್ದಯ್ಯನಕೋಟೆ ಮಠದ ಬಸವಲಿಂಗ ಸ್ವಾಮೀಜಿ, ಬಿಜೆಪಿ ರೈತ ಮೋರ್ಚಾದ ಸೂರಮ್ಮನಹಳ್ಳಿ ನಾಗರಾಜ್,ಪತ್ರಕರ್ತ ಪಾತಯ್ಯ, ವಲ್ಲಿ ಪ್ರಕಾಶ್, ಆಯೋಜಕ ಸಂತೋಷ್ ಊಡೇವು, ಸಂಗೀತ ಶಿಕ್ಷಕ ಕೆ.ಒ. ಶಿವಣ್ಣ, ಸಾಹಿತಿ ರಾಜುಸೂಲೇನಹಳ್ಳಿ ಭಾಗವಹಿಸಿದ್ದರು.

ಸಂಗೀತ ಸ್ಪರ್ಧೆಯಲ್ಲಿ ಜಗಳೂರಿನ ಸುಮಾ ಪ್ರಥಮ, ಕೊಟ್ಟೂರಿನ ಶ್ವೇತಾ ದ್ವಿತೀಯ ಸ್ಥಾನ ಮತ್ತು ಮಂಜು ತೃತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT