ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರಿಗೆ ಪೂರೈಕೆಯದ್ದೇ ಸಮಸ್ಯೆ

ಅಕ್ಷರ ಗಾತ್ರ

ಮೊಳಕಾಲ್ಮುರು:ತಾಲ್ಲೂಕಿನಲ್ಲಿ ಈ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬಾರದೇ ಇರುವುದರಿಂದ ನೀರಿನ ಸಮಸ್ಯೆಯ ಆತಂಕಎದುರಾಗಿದೆ.

ಎರಡು ವರ್ಷಗಳು ಉತ್ತಮ ಮಳೆಯಾಗಿದ್ದರಿಂದ ಅಷ್ಟಾಗಿ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ. ಅಂತರ್ಜಲ ಹೆಚ್ಚಳವಾದ ಕಾರಣ ರೈತರುನೀರಾವರಿ ಕೃಷಿಗೆ ಒತ್ತು ನೀಡಿ ಸಾಕಷ್ಟು ಕೊಳವೆಬಾವಿಗಳನ್ನು ಕೊರೆಸಿದ್ದಾರೆ. ರೇಷ್ಮೆ, ಟೊಮೆಟೊಗೆ ಬಂಪರ್ ಬೆಲೆ ಸಿಕ್ಕಿದ್ದರಿಂದ ಹೆಚ್ಚು ಹೆಚ್ಚುಕೊಳವೆಬಾವಿಗಳನ್ನು ಕೊರೆಯಿಸಿ ನೀರಾವರಿ ಕೃಷಿ ಮಾಡಿದ್ದಾರೆ. ಈಗ ಮಳೆ ಕೈಕೊಟ್ಟಿದ್ದು, ಅನೇಕ ಕಡೆ ಅಂತರ್ಜಲ ಕುಸಿತದ ಮಾತು ಕೇಳಿ ಬರುತ್ತಿದೆ.

ತಾಲ್ಲೂಕಿನ 40 ಗ್ರಾಮಗಳಿಗೆ ಶುದ್ಧ ನೀರು ನೀಡುವ ನಿಟ್ಟಿನಲ್ಲಿ ₹ 10 ಕೋಟಿ ವೆಚ್ಚದಲ್ಲಿ ಕೈಗೊಂಡಿದ್ದ ರಾಜೀವ್ ಗಾಂಧಿ ಸಬ್ ಮಿಷನ್ ಯೋಜನೆಸಂಪೂರ್ಣ ವ್ಯರ್ಥವಾಗಿದೆ. ಕುಡಿಯುವ ನೀರಿಗಾಗಿ ಬಹುನಿರೀಕ್ಷಿತ ಯೋಜನೆಯಾಗಿರುವ ತುಂಗಭದ್ರಾ ಹಿನ್ನೀರು ಯೋಜನೆ, ರಾಷ್ಟ್ರೀಯ ಜಲಜೀವನ್ಯೋಜನೆ ಎಷ್ಟರ ಮಟ್ಟಿಗೆ ಕೈಹಿಡಿಯಲಿವೆ ಎಂಬ ಆತಂಕವಿದೆ. ತಾಲ್ಲೂಕು ಹತ್ತಾರು ವರ್ಷಗಳಿಂದ ಕುಡಿಯವ ನೀರು, ಪ್ಲೋರೈಡ್ ಸಮಸ್ಯೆ ಎದುರಿಸುತ್ತಿದೆ.ಈ ವರ್ಷ ಮತ್ತೆ ಮಳೆ ಕೈಕೊಡುವ ಲಕ್ಷಣಗಳು ಕಾಣಸಿಕ್ಕಿದ್ದು, ಒಂದು ವರ್ಷ ಮಳೆ ಕೈಕೊಟ್ಟಲ್ಲಿ 3 ವರ್ಷ ನೀರಿನ ಬರ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆಕೋನಸಾಗರದ ನಾಗರಾಜ್.

ಅನೇಕ ಗ್ರಾಮಗಳಲ್ಲಿ ಸಾಕಷ್ಟು ಕುಡಿಯುವ ಸೌಲಭ್ಯವಿದ್ದರೂ ಸ್ಥಳೀಯ ಪ್ರಭಾವಿತರು, ಪಂಚಾಯಿತಿ ಸದಸ್ಯರು ತಮ್ಮ ಮನೆಗಳಿಗೆ ನೇರ ಸಂಪರ್ಕ ಪಡೆದುಬೇಕಾಬಿಟ್ಟಿಯಾಗಿ ಬಳಕೆ ಮಾಡುವುದರಿಂದ ಸಮಸ್ಯೆ ಎದುರಾಗುತ್ತಿದೆ. ಇನ್ನೂ ಕೆಲವೆಡೆ ನೀರುಗಂಟಿಗಳು ವಾಣಿಜ್ಯ ಬಳಕೆ ಸ್ಥಳಗಳಿಗೆ ಅಕ್ರಮವಾಗಿನೀರು ಬಿಡುತ್ತಿರುವ ಕಾರಣಕ್ಕೂ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ದೂರುತ್ತಾರೆ ಕೊಂಡ್ಲಹಳ್ಳಿಯ ತಿಪ್ಪೇಸ್ವಾಮಿ.

ತಾಲ್ಲೂಕಿನಲ್ಲಿ 132 ಜನವಸತಿ ಪ್ರದೇಶಗಳಿದ್ದು, ಹೆಚ್ಚಿನ ನೀರಿನಸಮಸ್ಯೆ ಕಂಡುಬಂದಿಲ್ಲ. ಆದರೆ ಸಂಭವನೀಯ ಗ್ರಾಮಗಳ ಪಟ್ಟಿಯನ್ನು ತಯಾರಿಸಿಕೊಳ್ಳಲಾಗಿದೆ. ಟಾಸ್ಕ್‌ಫೋರ್ಸ್‌ ಅನುದಾನದಲ್ಲಿ ಹೊಸದಾಗಿ12 ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ. ಹಾಳಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 10 ಘಟಕಗಳನ್ನು ದುರಸ್ತಿ ಮಾಡಿಸಲಾಗಿದ್ದು,10 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದುಜಿಲ್ಲಾ ಪಂಚಾಯಿತಿ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಪವನ್ ಮಾಹಿತಿನೀಡಿದರು.

ತಾಲ್ಲೂಕಿನಾದ್ಯಂತ ಬೇಸಿಗೆ ಪೂರ್ವದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿಲ್ಲ. ಆದರೂ ಸೂಲೇನಹಳ್ಳಿ, ಗುಂಡ್ಲೂರು, ತಳವಾರಹಳ್ಳಿ, ತಮ್ಮೇನಹಳ್ಳಿ,ಬೊಮ್ಮೇನಹಳ್ಳಿ, ಕೋನಾಪುರ, ಎಸ್. ಹನುಮಾಪುರ, ಅಮಕುಂದಿ, ಮಲ್ಲೇಹರವು, ಬಿ.ಜಿ.ಕೆರೆ, ಮಾರಮ್ಮನಹಳ್ಳಿ, ರಾವಲಕುಂಟೆ, ಸಂತೇಗುಡ್ಡ, ಎಸ್.ಹೊಸೂರು, ಚಿಕ್ಕೋಬನಹಳ್ಳಿ ಗ್ರಾಮಗಳಲ್ಲಿ ಸಂಭವನೀಯ ನೀರಿನ ಸಮಸ್ಯೆ ಎದುರಾಗಬಹುದು ಎಂದುನಿರೀಕ್ಷಿಸಲಾಗಿದೆ. ಇಲ್ಲಿ ಖಾಸಗಿಕೊಳವೆಬಾವಿಗಳನ್ನು ಗುರುತಿಸಲಾಗಿದ್ದು, ಸಮಸ್ಯೆ ಕಂಡುಬಂದಲ್ಲಿ ಈ ಕೊಳವೆಬಾವಿಗಳನ್ನು ವಶಕ್ಕೆ ಪಡೆದು ನೀರು ನೀಡಲಾಗುವುದು. ಟಾಸ್ಕ್‌ಪೋರ್ಸ್‌ನಲ್ಲಿ ಅನುದಾನವಿದೆ ಎಂದು ತಾಲ್ಲೂಕು ಪಂಚಾಯಿತಿ ಇಒ ಕೆ.ಇ. ಜಾನಕಿರಾಮ್ ಹೇಳಿದರು.

ಪಟ್ಟಣಕ್ಕೆ ರಂಗಯ್ಯನದುರ್ಗ ಜಲಾಶಯದಿಂದ ನೀರು ಬರುತ್ತಿದ್ದು, ನೀರಿನ ಮಣ್ಣಿನ ಬಣ್ಣ ಇನ್ನಷ್ಟು ಸುಧಾರಣೆಯಾಗಬೇಕಿದೆ. ಜಲಾಶಯದಲ್ಲಿ ನೀರಿನ ಲಭ್ಯತೆಕಡಿಮೆಯಾದಲ್ಲಿ ಮೊದಲಿನಂತೆ ಮತ್ತೆ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಇದಕ್ಕೆ ಪೂರಕ ಕಾರ್ಯ ಕೈಗೊಳ್ಳಲಿ.
–ವಿರೂಪಾಕ್ಷಪ್ಪ, ಶ್ರೀನಿವಾಸ ಬಡಾವಣೆ, ಮೊಳಕಾಲ್ಮುರು

ನೀರಿನ ಸಮಸ್ಯೆ ನಿವಾರಣೆಗೆ ವಿಶೇಷ ಗಮನ ಹರಿಸಲಾಗುತ್ತಿದೆ. ಪಿಡಿಒಗಳಿಂದ ಕಾಲಕಾಲಕ್ಕೆ ಮಾಹಿತಿ ತರಿಸಿಕೊಳ್ಳುತ್ತಿದ್ದು, ಸಂಭವ ಕಂಡುಬಂದಲ್ಲಿ ಟಾಸ್ಕ್‌ಫೋರ್ಸ್‌ಬಳಸಿಕೊಂಡು ಸಮಸ್ಯೆ ನಿವಾರಿಸಲಾಗುವುದು. ಸದ್ಯಕ್ಕೆ ಟ್ಯಾಂಕರ್ ಮೂಲಕ ಎಲ್ಲೂ ನೀರು ನೀಡುತ್ತಿಲ್ಲ.

ಕೆ.ಇ. ಜಾನಕಿರಾಮ್, ಇಒ. ತಾ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT