ಶನಿವಾರ, ಮೇ 21, 2022
28 °C

ಪುನೀತ್ ಪ್ರೇರಣೆ: ಕಣ್ಣು ದಾನ ಮಾಡಲು 150 ಜನ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಳಲ್ಕೆರೆ (ಚಿತ್ರದುರ್ಗ ಜಿ.): ಚಿತ್ರನಟ ಪುನೀತ್ ರಾಜಕುಮಾರ್ ಪ್ರೇರಣೆಯಿಂದ ಒಂದೇ ದಿನ ತಾಲ್ಲೂಕಿನ ದಾಸಯ್ಯನ ಹಟ್ಟಿಯ 150 ಜನ ನೇತ್ರದಾನ ಮಾಡಲು ಒಪ್ಪಿಗೆ ಪತ್ರ ನೀಡಿದರು.

ಮಂಗಳವಾರ ಗ್ರಾಮದಲ್ಲಿ ನಡೆದ ಪುನೀತ್ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಬಸವೇಶ್ವರ ಪುನರ್ಜ್ಯೋತಿ ನೇತ್ರ ಬ್ಯಾಂಕ್‌ನವರನ್ನು ಕರೆಸಿ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದರು.

‘ನೇತ್ರದಾನಕ್ಕೆ ಒಪ್ಪಿಗೆ ನೀಡುವ ಮೂಲಕ ಪುನೀತ್ ಅವರಿಗೆ ಗೌರವ ಸೂಚಿಸಿದ್ದೇವೆ. ನಮ್ಮ ಕಾರ್ಯ ನೋಡಿ ಬೇರೆಯವರೂ ನೇತ್ರದಾನಕ್ಕೆ ಮುಂದಾಗಲಿ ಎಂಬುದು ನಮ್ಮ ಉದ್ದೇಶ. ಈಗ 150 ಜನ ನೇತ್ರದಾನಕ್ಕೆ ಒಪ್ಪಿಗೆ ನೀಡಿದ್ದು, ಇನ್ನೂ ಹೆಚ್ಚು ಜನ ಮುಂದೆ ಬರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಕಾರ್ಯಕ್ರಮ ಆಯೋಜಿಸಿದ್ದ ಬಿ. ಚಂದ್ರು. ಎಂ.ಚಂದ್ರಶೇಖರ್.

‘ದಾಸಯ್ಯನ ಹಟ್ಟಿ ಗ್ರಾಮಸ್ಥರ ಕೋರಿಕೆಯ ಮೇರೆಗೆ ಅವರ ಗ್ರಾಮಕ್ಕೇ ಹೋಗಿ ನೇತ್ರದಾನದ ಒಪ್ಪಿಗೆ ಪತ್ರಗಳನ್ನು ಪಡೆದಿದ್ದೇವೆ. ಒಂದೇ ಗ್ರಾಮದಲ್ಲಿ ಇಷ್ಟೊಂದು ಜನ ನೇತ್ರದಾನಕ್ಕೆ ಸಹಿ ಹಾಕಿರುವುದು ಎಲ್ಲರಿಗೂ ಮಾದರಿ. ನೇತ್ರದಾನಕ್ಕೆ ಮರಣಪೂರ್ವ ನೋಂದಣಿ ಮಾಡಲೇಬೇಕು ಎಂದು ಕಡ್ಡಾಯವೇನೂ ಇಲ್ಲ. ಕನ್ನಡಕ ಹಾಕುವವರು, ಮಧುಮೇಹ, ಬಿಪಿ, ಕಣ್ಣಿನ ಪೊರೆ ಹಾಗೂ ಸಾಮಾನ್ಯ ಕಾಯಿಲೆಗಳು ನೇತ್ರದಾನಕ್ಕೆ ಅಡ್ಡಿ ಮಾಡುವುದಿಲ್ಲ’ ಎನ್ನುತ್ತಾರೆ ಬಸವೇಶ್ವರ ಪುನರ್ಜ್ಯೋತಿ ನೇತ್ರ ಬ್ಯಾಂಕ್ ಸ್ಥಾಪನಾ ಅಧ್ಯಕ್ಷೆ ಗಾಯತ್ರಿ
ಶಿವರಾಮ್.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು