ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿತನಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ: ಸಾಣೇಹಳ್ಳಿಶ್ರೀ

Last Updated 27 ಫೆಬ್ರುವರಿ 2022, 4:50 IST
ಅಕ್ಷರ ಗಾತ್ರ

ಹೊಸದುರ್ಗ: ‘ಸ್ವಾಮಿತನ ಗೌರವಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಬೇಡ ಎಂದರೂ ಪ್ರಶಸ್ತಿಗಳು ಬರುತ್ತಿವೆ. ಸಂಘಟಕರಿಗೆ ನೋವಾಗಬಹುದು ಎಂದು ಬಹಳ ಮುಜುಗರದಿಂದಲೇ ಪ್ರಶಸ್ತಿ ಸ್ವೀಕರಿಸುತ್ತಿದ್ದೇನೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಅಂಗವಾಗಿ ನವದೆಹಲಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ‘ಕನ್ನಡ ಭಾರತಿ ರಂಗ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

‘ಸಮಾಜಕ್ಕೆ ದಿಕ್ಕು ತೋರಿಸುವವರೇ ಇಂದು ದಿಕ್ಕು ತಪ್ಪುತ್ತಿದ್ದಾರೆ. ನಡೆಗೂ ನುಡಿಗೂ ಬಹಳ ಅಂತರವಿದೆ. ವೈಚಾರಿಕ ಶಕ್ತಿಯನ್ನು ಮೂಡಿಸುವ ಶಕ್ತಿ ನಾಟಕಗಳಿಗಿದೆ. ಪ್ರತಿಯೊಬ್ಬರಿಗೂ ನೋವು ಇದ್ದೇ ಇರುತ್ತದೆ. ಆ ನೋವು ಮರೆಸಲು ನಾಟಕಗಳು ಪ್ರೇರಣೆ. ಕನ್ನಡ ನಾಟಕಗಳನ್ನು ಹೆಚ್ಚು ಹೆಚ್ಚು ಪ್ರದರ್ಶಿಸುವ ವ್ಯವಸ್ಥೆ ಇಲ್ಲಿಆಗಬೇಕು’ ಎಂದರು.

ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆ ಅವರಿಗೆ ‘ಸರೋಜಿನಿ ಮಹಿಷಿ ಪ್ರಶಸ್ತಿ’, ‘ಡಾ. ಶಿವರಾಮ ಕಾರಂತರ ಪ್ರಶಸ್ತಿ’ಯನ್ನು ಹೆಗ್ಗೋಡಿನ ಅಕ್ಷರ ಪ್ರಕಾಶನ ಸಂಸ್ಥೆಗೆ ನೀಡಲಾಯಿತು.

ರಂಗಕರ್ಮಿ ಶ್ರೀನಿವಾಸ್ ಜಿ.ಕಪ್ಪಣ್ಣ, ನವದೆಹಲಿಯ ಜೆಎಸ್ಎಸ್ ಶಾಖಾ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಜೆಎನ್‌ಯು ಕನ್ನಡ ಅಧ್ಯಯನ ಪೀಠದ ಅಧ್ಯಕ್ಷ ಡಾ.ವಿಶ್ವನಾಥ್, ನಟ ಅನೂಪ್‌ ರೇವಣ್ಣ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ.ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT