ಭಾನುವಾರ, ನವೆಂಬರ್ 17, 2019
28 °C

ತಿಪ್ಪೇರುದ್ರಸ್ವಾಮಿ ದೇಗುಲ; ₹ 38.5 ಲಕ್ಷ ಸಂಗ್ರಹ

Published:
Updated:
Prajavani

ನಾಯಕನಹಟ್ಟಿ (ಚಿತ್ರದುರ್ಗ ಜಿಲ್ಲೆ): ಮಧ್ಯ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕೇಂದ್ರ ನಾಯಕನಹಟ್ಟಿಯ ಗುರು ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ಮಂಗಳವಾರ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಒಟ್ಟು ₹ 38.5 ಲಕ್ಷ ಸಂಗ್ರಹವಾಗಿದೆ.

ಸ್ವಾಮಿಯ ಒಳಮಠದ ಹುಂಡಿಗಳಲ್ಲಿ ₹ 30.5 ಲಕ್ಷ, ಹೊರಮಠದ ಹುಂಡಿಗಳಲ್ಲಿ ₹ 5.1 ಲಕ್ಷ ಹಾಗೂ ದಾಸೋಹದ ಹುಂಡಿಯಲ್ಲಿ ₹ 2.8 ಲಕ್ಷ ಸೇರಿ ಒಟ್ಟು 38.5 ಲಕ್ಷ ಸಂಗ್ರಹವಾಗಿದೆ. ಹುಂಡಿಗಳಿಂದ ಎಣಿಕೆಯಾದ ಹಣವನ್ನು ಸ್ಥಳೀಯ ಕೆನರಾ ಬ್ಯಾಂಕ್‌ನ ತಿಪ್ಪೇರುದ್ರಸ್ವಾಮಿ ದೇಗುಲದ ಖಾತೆಗೆ ಜಮಾ ಮಾಡಲಾಯಿತು.

ವಿಡಿಯೊ ಚಿತ್ರೀಕರಣದ ಮೂಲಕ ಹುಂಡಿ ಎಣಿಕೆ ಕಾರ್ಯ ನಡೆಯಿತು. ಇದರಲ್ಲಿ ಕಂದಾಯ ಇಲಾಖೆಯ 70 ಸಿಬ್ಬಂದಿ, ಕೆನರಾ ಬ್ಯಾಂಕ್ ಹಾಗೂ ದೇಗುಲದ ಸಿಬ್ಬಂದಿ ಪಾಲ್ಗೊಂಡಿದ್ದರು. ಇಲ್ಲಿ ಎಣಿಕೆ ಕಾರ್ಯವೂ ವರ್ಷದಲ್ಲಿ ಮೂರು ಬಾರಿ ನಡೆಯುತ್ತದೆ.

ತಹಶೀಲ್ದಾರ್ ಎಂ. ಮಲ್ಲಿಕಾರ್ಜುನ, ದೇಗುಲದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ್, ಉಪ ತಹಶೀಲ್ದಾರ್ ಟಿ. ಜಗದೀಶ್, ಮುಜುರಾಯಿ ತಹಶೀಲ್ದಾರ್ ಸಮೀವುಲ್ಲ, ಸಿಬ್ಬಂದಿ ರಂಗಪ್ಪ, ರೇಣುಕಮ್ಮ, ದೇಗುಲ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ರುದ್ರಮುನಿ, ನಾಗಣ್ಣ, ಮುನಿಯಪ್ಪ, ಗೋವಿಂದರಾಜ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಈಶ್ವರಪ್ಪ ಅವರೂ ಇದ್ದರು.

ಪ್ರತಿಕ್ರಿಯಿಸಿ (+)