ಮಂಗಳವಾರ, ನವೆಂಬರ್ 19, 2019
23 °C

ಹೊಳಲ್ಕೆರೆ | ರೈಲು ಡಿಕ್ಕಿ: ರೈತ, ಎರಡು ಎತ್ತು ಸಾವು

Published:
Updated:

ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಸಮೀಪದ ಹಳಿ ದಾಟುತ್ತಿದ್ದ ರೈತ ಮತ್ತು  ಎತ್ತುಗಳಿಗೆ ರೈಲು ಡಿಕ್ಕಿ ಹೊಡೆದು ರೈತ ಹಾಗೂ ಎರಡು ಎತ್ತುಗಳು ಮೃತಪಟ್ಟಿವೆ.

ರಾಮಗಿರಿಯ ರೈತ ನಾಗಪ್ಪ (40) ಮೃತಪಟ್ಟವರು. ಡಿಕ್ಕಿಯ ರಭಸಕ್ಕೆ ಅವರ ಕೈಕಾಲುಗಳು ತುಂಡಾಗಿವೆ. ಎತ್ತುಗಳು ದಾರುಣವಾಗಿ ಮೃತಪಟ್ಟಿವೆ.

ಮಾನವ ರಹಿತ ರೈಲ್ವೆ ಕ್ರಾಸಿಂಗ್‌ನಲ್ಲಿ ನಾಗಪ್ಪ ಎತ್ತುಗಳೊಂದಿಗೆ ಸಾಗುತ್ತಿದ್ದರು. ಹಳಿ ದಾಟುವ ಧಾವಂತದಲ್ಲಿ ಇದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಈ ಸಂಬಂಧ ದಾವಣಗೆರೆ ವಿಭಾಗದ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)