ಮೊಳಕಾಲ್ಮುರು: ಹೊಸಪೇಟೆ ಬಳಿಯ ತುಂಗಭದ್ರಾ ಜಲಾಶಯದ ಹಿನ್ನೀರು ಬಳಸಿ ದೂರದ ಪಾವಗಡದವರೆಗೆ ಕುಡಿಯಲು ಪೂರೈಸುವ ಬಹು ನಿರೀಕ್ಷಿತ ಯೋಜನೆಯಡಿಯ ನೀರು ಪೋಲಾಗಿ ದೊಡ್ಡ ಕೆರೆ ನಿರ್ಮಾಣ ಆಗಿರುವುದನ್ನು ತಾಲ್ಲೂಕಿನ ಬಿ.ಜಿ.ಕೆರೆ ಬಳಿಯ ಬಂಡೆಕಟ್ಟೆ ಬಳಿ ಕಾಣಬಹುದಾಗಿದೆ.

ತುಂಗಭದ್ರಾ ಹಿನ್ನೀರನ್ನು ತುಮಕೂರು ಜಿಲ್ಲೆಯ ಪಾವಗಡದವರೆಗೆ ಹಾಗೂ ಮಾರ್ಗ ಮಧ್ಯದ ಗ್ರಾಮಗಳ ಜನತೆಗೆ ಶುದ್ಧ ಕುಡಿಯುವ ನೀರು ನೀಡುವ ಯೋಜನೆ ಇದಾಗಿದೆ. ಇತ್ತೀಚೆಗೆ ನೀರು ನೀಡುವ ಪ್ರಾಯೋಗಿಕ ಕಾರ್ಯ ಆರಂಭವಾಗಿದೆ. ಪೈಪ್ಲೈನ್ ಅಳವಡಿಸಿರುವ ಮಾರ್ಗದುದ್ದಕ್ಕೂ ಅಲ್ಲಲ್ಲಿ ದೊಡ್ಡ ಓವರ್ ಹೆಡ್ ಟ್ಯಾಂಕ್ ನಿರ್ಮಿಸಿ ಪಕ್ಕದ ಗ್ರಾಮಗಳ ಸಣ್ಣ ಟ್ಯಾಂಕ್ಗಳಿಗೆ ನೀರು ನೀಡಲಾಗುತ್ತಿದೆ.

‘ಬಂಟೆಕಟ್ಟೆ ಬಳಿ ನಿರ್ಮಿಸಿರುವ 4.80 ಲಕ್ಷ ಲೀಟರ್ ಸಾಮರ್ಥ್ಯದ ಓವರ್ಹೆಡ್ ಟ್ಯಾಂಕ್ನಲ್ಲಿರುವ ಶುದ್ಧೀಕರಿಸಿದ ಕುಡಿಯುವ ನೀರು 25 ದಿನಗಳಿಂದ ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ಮುಂಭಾಗದಲ್ಲಿ ದೊಡ್ಡ ಕೆರೆ ನಿರ್ಮಾಣವಾಗಿದೆ. ಇದು ತುಂಬಿ ನೀರು ಮುಂದೆ ಹರಿದು ದಾರಿಯಲ್ಲಿರುವ ಚೆಕ್ ಡ್ಯಾಂಗಳು ಸಹ ತುಂಬಿಕೊಂಡಿವೆ. ವಿಷಯ ತಿಳಿದ ಸುತ್ತಮುತ್ತ ಗ್ರಾಮಗಳ ಯುವಕರು ತಂಡೋಪತಂಡವಾಗಿ ಹೋಗಿ ಶೇಖರಣೆ ನೀರಿನಲ್ಲಿ ಈಜಾಡಿ ಬಿಸಿಲಿನ ಬೇಗೆಯನ್ನು ತಣಿಸಿಕೊಳ್ಳುತ್ತಿದ್ದಾರೆ. ನೀರು ಸೋರಿಕೆ ಸ್ಥಳ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ’ ಎಂದು ಗ್ರಾಮಸ್ಥ ಮಾರಣ್ಣ ಹೇಳಿದರು.

ಅಚ್ಚರಿ ಎಂದರೆ ಇಷ್ಟೊಂದು ಪ್ರಮಾಣದ ಶುದ್ಧ ನೀರು ಪೋಲಾಗಿ ಹರಿದು ಹೋಗುತ್ತಿದ್ದರೂ ಸ್ಥಳೀಯ ಗ್ರಾಮ ಪಂಚಾಯಿತಿ ಸಿಬ್ಬಂದಿ, ಸುತ್ತಮುತ್ತಲ ತೋಟವರು, ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ, ಚಿತ್ರಗಳು ಹರಿದಾಡುತ್ತಿರುವುದನ್ನು ಕಂಡ ಮಾಧ್ಯಮ ಪ್ರತಿನಿಧಿಗಳು ಹಿನ್ನೀರು ಯೋಜನೆ ಉಸ್ತುವಾರಿ ಹೈದರಾಬಾದ್ನ ಮೇಘಾ ಕನ್ಸ್ಟ್ರಕ್ಷನ್ ಸಿಬ್ಬಂದಿ ಗಮನಕ್ಕೆ ತಂದಾಗ ಟ್ಯಾಂಕ್ ಬಳಿ ತಾಂತ್ರಿಕ ತೊಂದರೆಯಿಂದ ನೀರು ಹರಿದು ಹೋಗುತ್ತಿರುವುದು ತಿಳಿದುಬಂದಿದೆ.

‘ನೀರು ಹೊರ ಹೋಗುತ್ತಿರುವ ಟ್ಯಾಂಕ್ನಿಂದ ಹಿರೇಹಳ್ಳಿ, ಬುಕ್ಲೂರಹಳ್ಳಿ, ಚಿಕ್ಕಹಳ್ಳಿ, ಬಂಡೆಕಟ್ಟೆ, ಪಾಲನಾಯಕನಕೋಟೆ, ಮಲ್ಲೂರಹಳ್ಳಿ ಸೇರಿ 28 ಗ್ರಾಮಗಳ ಟ್ಯಾಂಕ್ಗಳಿಗೆ ಹಿನ್ನೀರು ಪೂರೈಕೆ ಮಾಡಲಾಗುತ್ತಿದೆ. ಟ್ಯಾಂಕ್ನಲ್ಲಿ ನೀರು ಭರ್ತಿಯಾದ ನಂತರ ಪೈಪ್ಗೆ ಆಟೊ ಲಾಕ್ ವ್ಯವಸ್ಥೆ ಮಾಡಲಾಗಿದೆ. ದುಷ್ಕರ್ಮಿಗಳು ಲಾಕ್ ವ್ಯವಸ್ಥೆಗೆ ಹಾನಿ ಮಾಡಿದ್ದು, ಸಮಸ್ಯೆಗೆ ಕಾರಣವಾಗಿದೆ. ತಕ್ಷಣ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿ ದುರಸ್ತಿ ಮಾಡಿಸಲಾಗುವುದು’ ಎಂದು ಉಸ್ತುವಾರಿ ಸಿಬ್ಬಂದಿ ಶಿವರಾಮರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿರುಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುತ್ತಿದ್ದು, ನೀರು ಮಿತವಾಗಿ ಬಳಸಿ’ ಎಂದು ಸರ್ಕಾರ ಜಾಗೃತಿ ಮೂಡಿಸುತ್ತಿದೆ. ಆದರೆ, ಇಲ್ಲಿ ಶುದ್ಧೀಕರಿಸಿದ ಅಪಾರ ನೀರು ಪೋಲಾಗುತ್ತಿದ್ದರೂ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡವರು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ನೀರು ವ್ಯರ್ಥವಾಗಿ ಹರಿದು ಪರಶುರಾಂಪುರ ಬಳಿ ಕೆರೆಯೊಂದು ತುಂಬಿ ಕೋಡಿ ಹರಿದಿತ್ತು. ಬಿ.ಜಿ.ಕೆರೆ ಬಳಿ ಹಳ್ಳ ತುಂಬಿ ಹರಿದಿತ್ತು, ಆಗ, ‘ಪೈಪ್ ಶುದ್ಧಗೊಳಿಸುವ ಕಾರ್ಯ ಮಾಡಲಾಗುತ್ತಿದೆ’ ಎಂಬ ಸಬೂಬು ನೀಡಲಾಗಿತ್ತು. ಇಂತಹ ಘಟನೆ ಮರುಕಳಿಸದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-44-199185346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.