ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಗೆರೆ: ಬುಕ್ಕರಾಯನ ಕೆರೆಗೆ ಹರಿದ ತುಂಗಭದ್ರಾ ನೀರು

ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮದ ದಿನವೇ ಪ್ರಯೋಗ
Last Updated 25 ಸೆಪ್ಟೆಂಬರ್ 2022, 3:20 IST
ಅಕ್ಷರ ಗಾತ್ರ

ಸಿರಿಗೆರೆ: ಸಿರಿಗೆರೆ ಭಾಗದ ಕೆರೆಗಳಿಗೆ ತುಂಗಭದ್ರಾ ನದಿ ನೀರನ್ನು ಹರಿಸಲು ಪೈಪ್‌ಲೈನ್ ಕಾಮಗಾರಿ ಮುಗಿದಿದ್ದು, ಭರಮಸಾಗರ ಜಾಕ್ವೆಲ್‌ನಿಂದ ಹೆಗ್ಗೆರೆ ಶೇಖರಣಾ ಘಟಕದ ಮೂಲಕ ಬುಕ್ಕರಾಯನ ಕೆರೆಗೆ ಪ್ರಯೋಗಾರ್ಥವಾಗಿ ನೀರು ಹರಿಸಲಾಯಿತು ಎಂದು ಸಭಾ ಕಾರ್ಯಕ್ರಮದಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 30ನೇ ಶ್ರದ್ಧಾಂಜಲಿ ಕಾರ್ಯಮದಲ್ಲಿ ಅವರು ಮಾತನಾಡಿದರು.

10 ವರ್ಷಗಳಿಂದ ಬುಕ್ಕರಾಯನ ಕೆರೆ ತುಂಬಿಲ್ಲ. ಕಳೆದ ಜೂನ್ ತಿಂಗಳಲ್ಲಿ ರೈತರು ಸ್ವಯಂಪ್ರೇರಿತರಾಗಿ ಕೆರೆಯ ಫಲವತ್ತಾದ ಮಣ್ಣನ್ನು ತಮ್ಮ ತೋಟಗಳಿಗೆ ಟ್ರ್ಯಾಕ್ಟರ್ ಮೂಲಕ ತೆಗೆದುಕೊಂಡು ಹೋಗಿದ್ದ ಫಲವಾಗಿ ಶೇ 75ರಷ್ಟು ನೀರು ಶೇಖರಣೆಯಾಗಲು ಅನುಕೂಲವಾಗಿದೆ ಎಂದರು. ಶ್ರದ್ಧಾಂಜಲಿ ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ರೈತರಿಗೆ ಸಂಬಂಧಿಸಿದ ಪರಿಕರಗಳು, ಪುಸ್ತಕ, ಬಟ್ಟೆ ಹಾಗೂ ಗೃಹೋಪಯೋಗಿ ಸ್ಟಾಲ್‌ಗಳು ಗಮನ ಸೆಳೆದವು. ಶ್ರದ್ಧಾಂಜಲಿ ಮಹಾಮಂಟಪದ ಎರಡೂ ಕಡೆ ಮತ್ತು ಐಕ್ಯಮಂಟಪದ ಮುಂಭಾಗದಲ್ಲಿ ಇದ್ದ ಬಣ್ಣದ ನೀರಿನ ಕಾರಂಜಿ ಮಕ್ಕಳಿಗೆ ಮನರಂಜನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT