ಶನಿವಾರ, ಫೆಬ್ರವರಿ 29, 2020
19 °C

ಮೊಳಕಾಲ್ಮುರು | ಇಬ್ಬರು ಕುರಿಗಾಹಿಗಳು ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಕೆರೆಗೆ ಇಳಿದಿದ್ದ ಇಬ್ಬರು ಕುರಿಗಾಹಿಗಳು ಬುಧವಾರ ನೀರು ಪಾಲಾಗಿದ್ದಾರೆ.

ಕುರಿಗಾಹಿಗಳಾದ ಕರಿಯಣ್ಣ  (30) ಪಾಂಡು (25) ಮೃತರು. ರಾಂಪುರ ಹೊರವಲಯದ ಕೆರೆಯಲ್ಲಿ ಈ ದುರಂತ ಸಂಭವಿಸಿದೆ.

ಕುರಿ ಮೇಯಿಸಲು ಹೋಗಿದ್ದ ಕರಿಯಣ್ಣ ಹಾಗೂ ಪಾಂಡು ಅವುಗಳ ಮೈತೊಳೆಯಲು ನೀರಿಗೆ ಇಳಿದಿದ್ದ ವೇಳೆ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ರಾಂಪುರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)