ದಾವಣಗೆರೆ ವಿಶ್ವವಿದ್ಯಾಲಯದ ಕ್ರೀಡಾಕೂಟ: ಶ್ಯಾಮಸುಂದರ್‌, ಅನಿತಾ ವೇಗಿಗಳು

7

ದಾವಣಗೆರೆ ವಿಶ್ವವಿದ್ಯಾಲಯದ ಕ್ರೀಡಾಕೂಟ: ಶ್ಯಾಮಸುಂದರ್‌, ಅನಿತಾ ವೇಗಿಗಳು

Published:
Updated:
Deccan Herald

ಚಿತ್ರದುರ್ಗ: ಇಲ್ಲಿನ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಗುರುವಾರ ಮಿಂಚಿನಂತೆ ಓಡಿದ ಎಂ.ಶ್ಯಾಮಸುಂದರ್‌ ಹಾಗೂ ಕೆ.ಅನಿತಾ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಅಥ್ಲೆಟಿಕ್ಸ್‌ನ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ‘ವೇಗಿ’ಗಳು ಎಂಬ ಬಿರುದು ಪಡೆದರು.

ದಾವಣಗೆರೆಯ ಬಿಸಿಪಿಎಫ್‌ ಕಾಲೇಜು ಪ್ರತಿನಿಧಿಸಿದ್ದ ಶ್ಯಾಮಸುಂದರ್‌ ಅವರು 100 ಮೀ ಓಟದಲ್ಲಿ 10.9 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೊದಲ ಸ್ಥಾನ ಪಡೆದರು. ಪ್ರಬಲ ಪೈಪೋಟಿ ನೀಡಿದ ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೊಹಮ್ಮದ್ ಜಿಜ್‌ಗನ್ (11.2 ಸೆ) ಹಾಗೂ ವಿ.ನವೀನ್ ಕುಮಾರ್ (11.5 ಸೆ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ಹೊಸದುರ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೆ.ಅನಿತಾ 14.3 ಸೆಕೆಂಡ್‌ಗಳಲ್ಲಿ ಗುರಿ ತಲು‍ಪಿದರು. ಹಿರಿಯೂರಿನ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಸ್‌.ಲಕ್ಷ್ಮಿ (14.7 ಸೆ) ಹಾಗೂ ಚಳ್ಳಕೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಿ.ಟಿ. ಶಾಂತಮ್ಮ (14.9 ಸೆ) ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದರು.

ವಿಶ್ವವಿದ್ಯಾನಿಲಯ ವ್ಯಾಪ್ತಿಯ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ 53 ಕಾಲೇಜುಗಳ 350ಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಪುರುಷ ಮತ್ತು ಮಹಿಳೆಯರ ವಿಭಾಗಗಳಲ್ಲಿ ನಡೆದ 100 ಮೀ ಓಟ, 1500 ಮೀ ಓಟ, 5000 ಮೀ ಓಟ, 400 ಮೀ. ಹರ್ಡಲ್ಸ್, ಜಾವಲಿನ್ ಥ್ರೋ, ಉದ್ದ ಜಿಗಿತ, ಶಾಟ್‌ಪುಟ್, ಡಿಸ್ಕಸ್ ಥ್ರೋ, 4*100 ಮೀ ರಿಲೇ ಸ್ಪರ್ಧೆಗಳಲ್ಲಿ ಕಳೆದ ವರ್ಷದ ಯಾವುದೇ ದಾಖಲೆಗಳನ್ನು ಕ್ರೀಡಾಪಟುಗಳು ಮುರಿದಿಲ್ಲ. ಅ.5 ಮತ್ತು 6 ರಂದು ಅಥ್ಲೆಟಿಕ್ಸ್ ಮತ್ತು ಗುಂಪು ಆಟಗಳು ನಡೆಯಲಿವೆ.

ಫಲಿತಾಂಶ: ಪುರುಷರ ವಿಭಾ

1500 ಮೀ ಓಟ:

ಎ.ಬಿ. ವೆಂಕಟೇಶ್, ಡಿಯುಪಿಸಿಯು ಕಾಲೇಜು, ದಾವಣಗೆರೆ–1, ಕಿರಣ್ ಗಾಲಿ , ಎಆರ್‌ಜಿ ಕಾಲೇಜು ದಾವಣಗೆರೆ–2, ಎಂ. ಮಂಜುನಾಥ, ಜಿಎಫ್‌ಜಿಸಿ ಹರಪನಹಳ್ಳಿ–3

ಹರ್ಡಲ್ಸ್ 400ಮೀ ಓಟ:

ಎಸ್‌.ಆರ್. ಮಿಥುನ್, ಜಿಎಫ್‌ಜಿಸಿ ಹರಪನಹಳ್ಳಿ–1, ಬಿ.ಗಣೇಶ್, ಎಕೆಜಿಎಫ್‌ಜಿಎಸ್ ಹರಪನಹಳ್ಳಿ–2, ಎ.ಶ್ರೀನಾಥ್, ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯೂರು–3.

ಉದ್ದಜಿಗಿತ:

ಆರ್.ರವಿ, ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯೂರು–1, ಎಂ.ಎ. ಸಂತೋಷ್, ಸರ್ಕಾರಿ ಕಲಾ ಕಾಲೇಜು–2, ಎಸ್.ಗಣೇಶ್, ಎಆರ್‌ಜಿ ಕಾಲೇಜು, ದಾವಣಗೆರೆ–3.

ಮಹಿಳೆಯರ ವಿಭಾಗ- 1500 ಮೀ ಓಟ:

ಎಂ.ನಂದಿನಿ, ಎಸ್‌ಎಸ್‌ಬಿಎಸ್ ಬಿಪಿಇಡಿ ಕಾಲೇಜು, ಐಮಂಗಲ–1, ಎಸ್.ರಂಜಿತಾ, ಎಡಿಬಿಎಫ್‌ಜಿ ಕಾಲೇಜು, ಹರಪನಹಳ್ಳಿ–2, ಸಿ. ಯಶೋದಾ, ಬಿಸಿಪಿಇ ಕಾಲೇಜು, ದಾವಣಗೆರೆ–3.

ಜಾವೆಲಿಂಗ್ ಥ್ರೋ:

ಎಚ್. ಅನ್ನಪೂರ್ಣ, ಜಿಎಫ್‌ಜಿಸಿ, ಹರಪನಹಳ್ಳಿ–1, ಆರ್.ಸಂಗೀತಾ, ಜಿಎಫ್‌ಜಿಸಿ ಮೊಳಕಾಲ್ಮುರು–2, ಪಿ. ಸಿ. ನಿರ್ಮಲಾ, ಜಿಎಫ್‌ಜಿಸಿ ಮಹಿಳಾ ಕಾಲೇಜು, ದಾವಣಗೆರೆ–3.

ಹರ್ಡಲ್ಸ್ 400 ಮೀ ಓಟ:

ವಿ.ಜಿ. ರಂಜಿತಾ, ಜಿಎಫ್‌ಜಿಸಿ ಹೊನ್ನಾಳಿ–1, ಎನ್. ಗೀತಾ, ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜು, ಚಿತ್ರದುರ್ಗ–2, ಶಬಾನಾ ಬಾನು, ಜಿಎಫ್‌ಜಿಸಿ ಭರಮಸಾಗರ–3.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯೂರಿನ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಡಿ.ಧರಣೇಂದ್ರಯ್ಯ ವಹಿಸಿದ್ದರು. ದಾವಣಗೆರೆ ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಎಂ.ಎಸ್.ರಾಜ್‌ಕುಮಾರ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದಾನಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಎಚ್.ತಿಪ್ಪೇಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !