ಹೊಳಲ್ಕೆರೆ: ಕೃಷಿ ಪರಿಕರ ಮಾರಾಟಗಾರರು ರೈತರಿಗೆ ಸಕಾಲದಲ್ಲಿ ಬೀಜ, ಗೊಬ್ಬರ, ಕೀಟನಾಶಗಳನ್ನು ಒದಗಿಸಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ್ ಸಲಹೆ ನೀಡಿದರು.
ಪಟ್ಟಣದಲ್ಲಿ ಕೃಷಿ ಪರಿಕರ ಮಾರಾಟಗಾರರ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.
ಮಾರಾಟಗಾರರಿಗೆ ರೈತರ ಸೇವೆ ಪ್ರಮುಖ ಗುರಿಯಾಗಬೇಕು. ರೈತರಿಗೆ ಉತ್ತಮ ಗುಣಮಟ್ಟದ ಬೀಜ, ಗೊಬ್ಬರ ಒದಗಿಸಬೇಕು. ಹೆಚ್ಚು ಬೆಲೆ ಪಡೆಯದೆ ಸೂಕ್ತ ಬೆಲೆಗೆ ಪರಿಕರ ಮಾರಾಟ ಮಾಡಬೇಕು. ಪ್ರಮಾಣೀಕರಿಸಿದ ಬೀಜ, ಗೊಬ್ಬರ, ಕೀಟನಾಶಕಗಳನ್ನು ಮಾತ್ರ ಮಾರಾಟ ಮಾಡಬೇಕು. ಕಳಪೆ ಗುಣಮಟ್ಡದ ಬೀಜ, ಗೊಬ್ಬರಗಳನ್ನು ರೈತರಿಗೆ ಕೊಟ್ಟರೆ ಅವರು ಹೆಚ್ಚು ನಷ್ಟ ಅನುಭವಿಸುತ್ತಾರೆ ಎಂದರು.
ವ್ಯಾಪಾರಿಗಳು ಹಾಗೂ ರೈತರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರೈತರಿಂದ ದೇಶದ ಅರ್ಥಿಕತೆ ಸದೃಢವಾಲಿದೆ. ರೈತರು ಬೆಳೆದ ಆಹಾರ ಧ್ಯಾನ್ಯಗಳನ್ನೇ ಎಲ್ಲರೂ ತಿನ್ನಬೇಕು. ಕೃಷಿ ಪರಿಕರ ಮಾರಾಟಗಾರರೂ ಕೂಡ ರೈತ ಕುಟುಂಬದಿಂದ ಬಂದವರೇ ಆಗಿದ್ದು, ರೈತರಿಗೆ ಮೋಸ ಮಾಡುವುದಿಲ್ಲ ಎಂದು ಕೃಷಿ ಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಮಾಕಂ ವೆಂಕಟೇಶ್ ಮೂರ್ತಿ ತಿಳಿಸಿದರು.
ಕೃಷಿ ಇಲಾಖೆಯ ಗೋಪಿಕೃಷ್ಣ, ಸುರೇಶ್, ವೀರಭದ್ರಪ್ಪ, ಯುವರಾಜ್ ಗೌಡ, ಚೇತನ್‌ಕುಮಾರ್, ವಿಜಯ ಕುಮಾರ್, ಕರಿಬಸಣ್ಣ, ಗಂಗಾಧರಪ್ಪ, ಗುರುರಾಜ್ ಹಾಗೂ ತಾಲ್ಲೂಕಿನ ಕೃಷಿ ಪರಿಕರ ಮಾರಾಟಗಾರರು, ಕೃಷಿ ಇಲಾಖೆಯ ಸಿಬ್ಬಂದಿ ಸಭೆಯಲ್ಲಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.