ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳ್ಳಕೆರೆ: ಶಾಲಾ–ಕಾಲೇಜು ಅಭಿವೃದ್ಧಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆ

ಪ್ರಾರ್ಥನಾ ಮಂದಿರ ನಿರ್ಮಾಣ, ದೇಗುಲಗಳ ಜೀರ್ಣೋದ್ಧಾರಕ್ಕೆ ಪ್ರಾಶಸ್ತ್ಯ
Last Updated 29 ಡಿಸೆಂಬರ್ 2021, 4:09 IST
ಅಕ್ಷರ ಗಾತ್ರ

ಚಳ್ಳಕೆರೆ: ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ತಾಲ್ಲೂಕಿನ ವಿವಿಧ ಸಮುದಾಯದವರ ಪ್ರಾರ್ಥನಾ ಮಂದಿರ ನಿರ್ಮಾಣ, ದೇಗುಲಗಳ ಜೀರ್ಣೋದ್ಧಾರ ಹಾಗೂ ಶಾಲಾ–ಕಾಲೇಜುಗಳಲ್ಲಿ ಮೂಲಸೌಲಭ್ಯ ಅಭಿವೃದ್ಧಿಗೆ ಹೆಚ್ಚು ಬಳಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಪ್ರೌಢಶಾಲೆ, ಪದವಿ ಕಾಲೇಜುಗಳ ಕಟ್ಟಡ ನಿರ್ಮಾಣ, ಅಗತ್ಯವಿರುವ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಪ್ರಾರ್ಥನಾ ಮಂದಿರ ನಿರ್ಮಾಣ ಹಾಗೂ ದೇಗುಲಗಳ ಜೀರ್ಣೋದ್ಧಾರಕ್ಕೂ ಶಾಸಕರು ನೆರವು ನೀಡಿದ್ದಾರೆ. ಕೋವಿಡ್ ಪರಿಸ್ಥಿತಿ ಎದುರಿಸಲು ಜಿಲ್ಲಾ ಖನಿಜ ನಿಧಿ (ಡಿಎಂಎಫ್) ನೆರವು ಪಡೆಯಲಾಗಿದೆ.

2018–2019ನೇ ಸಾಲಿನಲ್ಲಿ ₹ 2 ಕೋಟಿಯಲ್ಲಿ ನಗರದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡ ನಿರ್ಮಾಣಕ್ಕೆ ₹ 90 ಲಕ್ಷ, ಹೆಗ್ಗೆರೆ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ₹ 12 ಲಕ್ಷ, ಚಳ್ಳಕೆರೆ ಮಹಾದೇವ ವಿಶ್ವಕರ್ಮ ಶಿಕ್ಷಣ ಸಂಸ್ಥೆ ಕಟ್ಟಡಕ್ಕೆ ₹ 5 ಲಕ್ಷ, ವೆಂಕಟೇಶ್ವರನಗರದ ಕೊಳೆಗೇರಿ ಕುಶಲಕರ್ಮಿಗಳಿಗೆ ಶೆಡ್ ನಿರ್ಮಾಣಕ್ಕೆ ₹ 1.20 ಲಕ್ಷ, ಕಡಬನಕಟ್ಟೆ ಸಮುದಾಯಭವನಕ್ಕೆ ₹ 15 ಲಕ್ಷ, ಭಜನಾ ಮಂದಿರಕ್ಕೆ ₹ 10 ಲಕ್ಷ, ಬೊಗಳೇರಹಟ್ಟಿ ಸಮುದಾಯಭವನಕ್ಕೆ ₹ 5 ಲಕ್ಷ, ಬಿಎಂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬಯಲು ರಂಗಮಂದಿರ ನಿರ್ಮಾಣಕ್ಕೆ ₹ 10 ಲಕ್ಷ, ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದ ಬಯಲು ರಂಗಮಂದಿರ, ತಡೆಗೋಡೆ ನಿರ್ಮಾಣಕ್ಕೆ ₹ 13.65 ಲಕ್ಷ, ಕಡಬನಕಟ್ಟಿ ಬಸ್‌ನಿಲ್ದಾಣದ ಸಮೀಪದ ಆರ್.ಒ. ಪ್ಲಾಂಟ್, ಮಳಿಗೆ–ಲೈಬ್ರೆರಿಗೆ ₹ 25.55 ಲಕ್ಷ ಮತ್ತು ಶಾದಿಮಹಲ್ ಸಮುದಾಯ ಭವನ ನಿರ್ಮಾಣಕ್ಕೆ ಹಣವನ್ನು ಸದ್ಬಳಕೆ ಮಾಡಲಾಗಿದೆ.

2019–2020ನೇ ಸಾಲಿನಲ್ಲಿ ಬಿಡುಗಡೆಯಾದ ₹ 2 ಕೋಟಿಯಲ್ಲಿ ₹ 25 ಲಕ್ಷ ಚಳ್ಳಕೆರೆ ಶಾದಿಮಹಲ್ ಸಮೀಪ ಸಮುದಾಯ ಭವನಕ್ಕೆ, ₹50 ಲಕ್ಷ ಚಿಕ್ಕಗೊಂಡನಹಳ್ಳಿ ಸಮುದಾಯ ಭವನಕ್ಕೆ, ₹ 5 ಲಕ್ಷ ನಿವೃತ್ತ ನೌಕರರ ಹೆಚ್ಚುವರಿ ಕಟ್ಟಡ, ₹ 5 ಲಕ್ಷ ಮುದ್ದಾಪುರ ಗ್ರಾಮ ಪಂಚಾಯಿತಿ ಕಟ್ಟಡ ಕಾಮಗಾರಿ, ₹ 3 ಲಕ್ಷ ಪರಶುರಾಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಯೋಗಾಲಯ ಮತ್ತು ಉಪಕರಣಗಳ ಖರೀದಿಗೆ, ₹ 4.9 ಲಕ್ಷ ಚಿಕ್ಕಗೊಂಡನಹಳ್ಳಿ, ಎಂ.ಉಪ್ಪಾರಹಟ್ಟಿ, ರಾಮಜೋಗಿಹಳ್ಳಿ, ಬೊಮ್ಮಸಮುದ್ರ, ರಾಯನಹಳ್ಳಿ, ದುರ್ಗಾವರ, ಕಡಬನಕಟ್ಟೆ ಅಂಗವಿಕಲರಿಗೆ ತ್ರಿಚಕ್ರವಾಹನ ಖರೀದಿ, ₹ 10 ಲಕ್ಷ ಚಳ್ಳಕೆರೆ ಸವಿತಾ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ, ₹ 6.50 ಲಕ್ಷ ನಗರಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ದಸ್ತಾನು ಮಳಿಗೆ, ₹ 7.50 ಲಕ್ಷ ಕೂನಬೇವು, ತುರುವನೂರು ಗ್ರಾಮದಲ್ಲಿ ಸಮುದಾಯ ಭವನಕ್ಕೆ, ₹ 5 ಲಕ್ಷ ಚಳ್ಳಕೆರೆ ನಗರದ ರಾಘವೇಂದ್ರ ಮಠ, ₹ 10 ಲಕ್ಷ ಬೊಮ್ಮಕ್ಕನಹಳ್ಳಿ ಸಮುದಾಯ ಭವನಕ್ಕೆ, ₹ 10 ಲಕ್ಷ ಹುಣಸೆಕಟ್ಟೆ ಗ್ರಾಮದಲ್ಲಿ ಪ್ರಾರ್ಥನಾ ಮಂದಿರಕ್ಕೆ, ₹ 5 ಲಕ್ಷ ಚಿಪ್ಪಿಕೆರೆ ಪ್ರಾರ್ಥನಾ ಮಂದಿರಕ್ಕೆ, ₹ 5 ಲಕ್ಷ ಚೂರಿಪಾಪಯ್ಯನಹಟ್ಟಿಯಲ್ಲಿ ಸಮುದಾಯ ಭವನಕ್ಕೆ, ₹ 5 ಲಕ್ಷ ಸಿದ್ದೇಶ್ವರನದುರ್ಗ ಮರಡಿಹಟ್ಟಿ ಗ್ರಾಮದಲ್ಲಿ ಸಮುದಾಯ ಭವನಕ್ಕೆ, ₹ 10 ಲಕ್ಷ ಪರಶುರಾಂಪುರ ಸರ್ವೋದಯ ಶಿಕ್ಷಣ ಸಂಸ್ಥೆ ಕಟ್ಟಡ ನಿರ್ಮಾಣಕ್ಕೆ, ₹ 6 ಲಕ್ಷ ಚೌಳೂರು ಗ್ರಾಮದ ಪ್ರಾರ್ಥನಾ ಮಂದಿರಕ್ಕೆ, ₹ 20 ಲಕ್ಷ ಚಳ್ಳಕೆರೆ ಜೈನ ಸಮುದಾಯದ ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಬಳಕೆ ಮಾಡಲಾಗಿದೆ. ಇದರಲ್ಲಿ ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ.

2020–2021ನೇ ಸಾಲಿನಲ್ಲಿ ₹ 2 ಕೋಟಿ ಅನುದಾನದಲ್ಲಿ ₹ 1 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ₹ 1 ಕೋಟಿಯನ್ನು ಸರ್ಕಾರಿ ಶಾಲಾ ಕಟ್ಟಡ ದುರಸ್ತಿಗೆ ಬಳಸಲಾಗಿದೆ. ಅಮ್ಲಜನಕ ಘಟಕ ಸ್ಥಾಪನೆ, ಸಿಲಿಂಡರ್ ಖರೀದಿ ಹಾಗೂ ವ್ಯಾಕ್ಸಿನ್ ಮತ್ತು ವಿವಿಧ ಅಭಿವೃದ್ಧಿ ಯೋಜನೆಯ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ.

2021–2022ನೇ ಸಾಲಿನಲ್ಲಿ ಬಿಡುಗಡೆಯಾದ ₹ 2 ಕೋಟಿಯಲ್ಲಿ ಚಳ್ಳಕೆರೆ ಕಾಟಪ್ಪನಹಟ್ಟಿ, ಸಿದ್ದಾಪುರ, ಬೊಮ್ಮನಕುಂಟೆ, ಬೊಮ್ಮಕ್ಕನಹಳ್ಳಿ, ಚಿತ್ರದುರ್ಗದ ಸುಲ್ತಾನಪುರ, ತುರುವನೂರು, ತುರುವನೂರು, ಬಾಗೇನಹಾಳ್, ತುರುವನೂರು, ದೊಡ್ಡೇರಿ, ಗೋಪನಹಳ್ಳಿ ಸಮುದಾಯ ಭವನ ನಿರ್ಮಾಣ, ಸೂರೇನಹಳ್ಳಿ, ಯಲಗಟ್ಟೆ ಗ್ರಾಮದಲ್ಲಿ ಭವನ–ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ತಲಾ ₹ 10 ಲಕ್ಷ, ಹುಣಸೆಕಟ್ಟೆ ಗ್ರಾಮದ ಶಾಲಾ ಕಟ್ಟಡ ದುರಸ್ತಿಗೆ ₹ 15 ಲಕ್ಷ, ಗೋಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ದುರಸ್ತಿಯನ್ನು ₹ 10 ಲಕ್ಷ ವೆಚ್ಚದಲ್ಲಿ ಕೈಗೊಂಡಿದ್ದು, ಕೆಲಸಗಳು ನಡೆದಿವೆ.

***

ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಐದಾರು ಕಡೆ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ವಿವಿಧ ಸಮುದಾಯದವರ ಪ್ರಾರ್ಥನಾ ಮಂದಿರ ನಿರ್ಮಾಣ, ಹೆಗ್ಗೆರೆ ತಾಯಮ್ಮ, ಕ್ಷೇತ್ರ ಮಾದರಿ ಶಾಲೆ, ಹಳೆಟೌನ್ ಸರ್ಕಾರಿ ಶಾಲಾ ಕಟ್ಟಡದ ಅಭಿವೃದ್ಧಿಗೆ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ.

- ಟಿ. ರಘುಮೂರ್ತಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT