ಸೇತುವೆ ನಿರ್ಮಾಣ; ಶಾಶ್ವತ ಪರಿಹಾರ
ಕಾತ್ರಿಕೇನಹಳ್ಳಿ ಸಮೀಪ ಹರಿಯುವ ವೇದಾವತಿ ನದಿ ವಿಚಾರದಲ್ಲಿ ಸಮಸ್ಯೆಯ ಗೋಜಲು ಇದೆ. ನಾಲೆಗಳ ತೂಬು ಹಾಕಿದರೆ ಗ್ರಾಮಸ್ಥರು, ಶಾಲಾ ಮಕ್ಕಳ ಓಡಾಟಕ್ಕೆ ತೊಂದರೆಯಾಗುತ್ತದೆ. ತೂಬು ಹಾಕದಿದ್ದರೆ ಅಚ್ಚುಕಟ್ಟು ಪ್ರದೇಶದ ರೈತರ ಜಮೀನುಗಳು ಜೋಪು ಹತ್ತುತ್ತವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ವೇದಾವತಿ ನದಿಗೆ ಸೇತುವೆ ನಿರ್ಮಿಸುವ ಕುರಿತು ವಿಸ್ತೃತ ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಕಳಿಸಲಾಗಿದೆ. ಸೇತುವೆ ನಿರ್ಮಾಣಗೊಂಡರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಜಯಕುಮಾರ್ ತಿಳಿಸಿದರು.