ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ವರಮಹಾಲಕ್ಷ್ಮಿ ಹಬ್ಬಕ್ಕೆ ಖರೀದಿ ಜೋರು

ಮುಖವಾಡ, ಆಭರಣಗಳ ಖರೀದಿಗೆ ಉತ್ಸಾಹ, ಮಾರುಕಟ್ಟೆಯಲ್ಲಿ ಜನಜಾತ್ರೆ
Published 15 ಆಗಸ್ಟ್ 2024, 15:50 IST
Last Updated 15 ಆಗಸ್ಟ್ 2024, 15:50 IST
ಅಕ್ಷರ ಗಾತ್ರ

ಚಿತ್ರದುರ್ಗ: ಮಹಿಳೆಯರು ವರಮಹಾಲಕ್ಷ್ಮಿ ವ್ರತಾಚರಣೆಯ ಸಂಭ್ರಮದಲ್ಲಿದ್ದಾರೆ. ನಗರದ ಮಾರುಕಟ್ಟೆಯಲ್ಲಿ ಮಹಿಳೆಯರೇ ತುಂಬಿ ತುಳುಕುತ್ತಿದ್ದು ಖರೀದಿಯ ಭರಾಟೆ ಜೋರಾಗಿದೆ.

ಕಳೆದ ಎರಡು ದಿನಗಳಿಂದ ನಗರದ ತರಕಾರಿ ಮಾರುಕಟ್ಟೆಯಲ್ಲಿ ಹಣ್ಣು, ಹೂವು ಹಾಗೂ ಪೂಜಾ ಸಾಮಗ್ರಿಗಳು ದುಬಾರಿಯಾಗಿವೆ. ಆದರೂ ಮಹಿಳೆಯರ ಹಬ್ಬದ ಉತ್ಸಾಹಕ್ಕೆ ಬೆಲೆ ಏರಿಕೆ ಅಡ್ಡಿಯಾಗಿಲ್ಲ. ಮಳೆಯ ನಡುವೆಯೂ ಮಹಿಳೆಯರು ಖರೀದಿಯಲ್ಲಿ ಉತ್ಸಾಹ ತೋರಿಸುತ್ತಿದ್ದಾರೆ.

ನಗರದ ಸಂತೆ ಹೊಂಡ, ಲಕ್ಷ್ಮಿಬಜಾರ್‌, ಮದೇಹಳ್ಳಿ ರಸ್ತೆ,ಗಾಂಧಿ ವೃತ್ತ ಭಾಗದಲ್ಲಿ ಮಹಿಳೆಯರ ಜಾತ್ರೆಯೇ ಸೇರಿತ್ತು. ಪೂಜೆ ಸಾಮಗ್ರಿ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಲಕ್ಷ್ಮಿ ಪೂಜೆ ಆಕರ್ಷಕ ರೂಪ ಪಡೆದಿದ್ದು ಮಾರುಕಟ್ಟೆಗೆ ಥರಾವರಿ ಲಕ್ಷ್ಮಿ ಮೂರುತಿ, ಮುಖವಾಡಗಳು ಬಂದಿವೆ. ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಮಾಡಿದ ಮುಖವಾಡ, ಕಿರೀಟ ಹಾಗೂ ಇತರ ಒಡವೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ₹ 300– 2,000 ಮುಖವಾಡಗಳು ದೊರೆಯುತ್ತಿವೆ.

‘ಲಕ್ಷ್ಮಿ ಮುಖವನ್ನು ತೆಂಗಿನ ಕಾಯಿಯಿಂದ ಮಾಡುತ್ತಿದ್ದೆವು. ಸೀರೆಯುಡಿಸಲು ರಾತ್ರಿಯಿಡೀ ಕೆಲಸ ಹಿಡಿಯುತ್ತಿತ್ತು. ಆದರೆ ಈಗ ಅಂತಹ ಯಾವುದೇ ಸಮಸ್ಯೆ ಇಲ್ಲ. ಸೀರೆ ಉಡಿಸಿರುವ ಸಿದ್ಧ ಮೂರುತಿ ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಇದರಿಂದ ವ್ರತಾಚರಣೆ ಸುಲಭವಾಗಿದೆ’ ಎಂದು ಮಹಿಳೆಯೊಬ್ಬರು ತಿಳಿಸಿದರು.

ಮುಖವಾಡಗಳನ್ನು ಷೋಕೇಸ್‌ಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಚಿನ್ನದಂಗಡಿಗಳಲ್ಲಿ ಜನಜಂಗುಳಿ ಇತ್ತು. ಜನಸಂದಣಿ ಹೆಚ್ಚು ಇದ್ದ ಕಾರಣ ಮುಖ್ಯರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ವಾಹನ ಸವಾರರು ಪರದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT