ಮಂಗಳವಾರ, ನವೆಂಬರ್ 19, 2019
22 °C

ಹೊಸದುರ್ಗ: ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಪಶುವೈದ್ಯರ ರಕ್ಷಣೆ

Published:
Updated:

ಚಿತ್ರದುರ್ಗ: ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಲು ತೆರಳಿ ಹರಿಯುತ್ತಿದ್ದ ನೀರಿನಲ್ಲಿ ಅಪಾಯಕ್ಕೆ ಸಿಲುಕಿದ್ದ ಪಶು ವೈದ್ಯರಿಬ್ಬರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಪಶುವೈದ್ಯರಾದ ಡಾ.ಅರವಿಂದ ಮತ್ತು ಡಾ.ದಿವ್ಯಾ ಅಪಾಯದಿಂದ ಪಾರಾಗಿದ್ದಾರೆ. ಅವರು ಚಲಿಸುತ್ತಿದ್ದ ಕಾರಿನ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದೆ.ಹೊಸದುರ್ಗ ತಾಲ್ಲೂಕಿನ ಜಾನಕಲ್ ಗ್ರಾಮದ ಬಳಿ ಘಟನೆ ನಡೆದಿದೆ.

ಜಾನಕಲ್ ಗ್ರಾಮದಿಂದ ಹೊಸದುರ್ಗಕ್ಕೆ ತೆರಳುವಾಗ ಹಾಲುರಾಮೇಶ್ವರ ಗ್ರಾಮದ ಹತ್ತಿರ ಅವರ ಕಾರು ಪ್ರವಾಹಕ್ಕೆ ಸಿಲುಕಿದೆ. ತುಂಬಾ ಅಪಾಯ ಪರಿಸ್ಥಿತಿಯಲ್ಲಿ ಇರುವುದನ್ನು ಪಶುವೈದ್ಯಾಧಿಕಾರಿ ಡಾ.ಇ. ಕೆ. ಶಿವಣ್ಣ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಬಳಿಕ ಹೊಸದುರ್ಗ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು.

ಪ್ರತಿಕ್ರಿಯಿಸಿ (+)