ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಉಲ್ಲಂಘನೆ: ಮಳಿಗೆ ಪರವಾನಗಿ ರದ್ದು

ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಕೃಷಿ ನಿರ್ದೇಶಕರ ಭೇಟಿ
Last Updated 13 ಆಗಸ್ಟ್ 2022, 4:03 IST
ಅಕ್ಷರ ಗಾತ್ರ

ಹಿರಿಯೂರು:ಕೃಷಿ ಇಲಾಖೆಯ ಕೇಂದ್ರ ಕಚೇರಿಯ ಹೆಚ್ಚುವರಿ ಕೃಷಿ ನಿರ್ದೇಶಕ (ಜಾಗೃತದಳ) ಡಾ. ಅನೂಪ್ ಶುಕ್ರವಾರ ನಗರದ ವಿವಿಧ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದರು.

ನಿಯಮ ಉಲ್ಲಂಘನೆ ಸಂಬಂಧಮಾರಾಟ ಮಳಿಗೆಯ ಪರವಾನಗಿ ರದ್ದುಪಡಿಸಿದರು.

ಸುಗ್ಗಿ ಟ್ರೇಡರ್ಸ್‌ ಮಳಿಗೆಗೆ ಭೇಟಿ ನೀಡಿದಾಗ ಯೂರಿಯಾ, ರಸಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದನ್ನು ಗಮನಿಸಿದರು. ದಾಸ್ತಾನು ಪ್ರಮಾಣ, ದರಪಟ್ಟಿ, ಪರವಾನಗಿ ಪ್ರದರ್ಶನ, ರೈತರಿಗೆ ಬಿಲ್ ನೀಡುವುದನ್ನು ಸರಿಯಾಗಿ ಪಾಲನೆ ಮಾಡದೆ ರಸಗೊಬ್ಬರ ನಿಯಂತ್ರಣ ಕಾಯ್ದೆ ಆದೇಶ (1985) ರ ಉಲ್ಲಂಘನೆ ಮಾಡಿರುವುದನ್ನು ಗಮನಿಸಿದರು. ರಸಗೊಬ್ಬರ ಚಿಲ್ಲರೆ ಮಾರಾಟದ ಪರವಾನಗಿಯನ್ನು ರದ್ದು ಪಡಿಸಿದರು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಉಲ್ಫತ್ ಜೈಬಾ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಕೃಷಿ ಪರಿಕರ, ರಸಗೊಬ್ಬರ, ಜೈವಿಕಗೊಬ್ಬರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದರಪಟ್ಟಿ, ದಾಸ್ತಾನು ಪ್ರಮಾಣ, ರೈತರಿಗೆ ಬಿಲ್ ನೀಡುವುದು, ಪರವಾನಗಿ ಪ್ರದರ್ಶಿಸದ ಸುಗ್ಗಿ ಟ್ರೇಡರ್ಸ್, ಮೈಕ್ರೋಬಿ, ಚೇತನ ಆಗ್ರೋ ಕೇಂದ್ರಗಳಿಗೆ ನೋಟಿಸ್ ನೀಡಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಸಿದರು.

ಯಾವುದೇ ಚಿಲ್ಲರೆ ಅಥವಾ ಸಗಟು ರಸಗೊಬ್ಬರ ಮಾರಾಟ ಪರವಾನಗಿ ಹೊಂದಿದ ಕೃಷಿ ಪರಿಕರ ಮಾರಾಟಗಾರರು ದಾಸ್ತಾನು ಮತ್ತು ದರಪಟ್ಟಿ ಪ್ರದರ್ಶಿಸದೆ ಮಾರಾಟ ಮಾಡುವುದು ಕಂಡುಬಂದಲ್ಲಿ, ಕೃತಕ ರಸಗೊಬ್ಬರ ಅಭಾವ ಸೃಷ್ಟಿಸಿದಲ್ಲಿ ಮಾರಾಟ ಪರವಾನಗಿ ರದ್ದು ಪಡಿಸಲಾಗುವುದು ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ್ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT