ಮಂಗಳವಾರ, ಡಿಸೆಂಬರ್ 7, 2021
24 °C
ವಿಶ್ವಕರ್ಮ ಪೀಠ

ಚಿತ್ರದುರ್ಗ: ವಿಶ್ವಕರ್ಮ ಸಮುದಾಯದ ನಿರ್ಲಕ್ಷ್ಯ; ಜ್ಞಾನಭಾಸ್ಕರ ಸ್ವಾಮೀಜಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ವಿಶ್ವಕರ್ಮ ಸಮುದಾಯದ ಸಮಸ್ಯೆಗಳನ್ನು ಆಲಿಸಲು ಅಖಿಲ ಭಾರತ ವಿಶ್ವಕರ್ಮ ಪರಿಷತ್ ಪ್ರಮುಖರು ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಸಮಾಜ ಬಾಂಧವರು ಸಹಕರಿಸಿ ಪರಿಷತ್‍ಗೆ ಶಕ್ತಿ ತುಂಬಬೇಕು ಎಂದು ಹಿರಿಯೂರು ಚಿಟುಗು ಮಲ್ಲೇಶ್ವರ ವಿಶ್ವಕರ್ಮ ಪೀಠದ ಜ್ಞಾನಭಾಸ್ಕರ ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ‘ಸಮುದಾಯ ಸಂಪೂರ್ಣ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಸರ್ಕಾರ ಸಹ ವಿಶ್ವಕರ್ಮ ಸಮಾಜವನ್ನು ಕಡೆಗಣಿಸಿವೆ. ಸಂಕಷ್ಟದಲ್ಲಿರುವ ಸಮಾಜದ ಅಳಲು ಆಲಿಸುವ ರಾಜಕೀಯ ನಾಯಕರೂ ಸಮುದಾಯದಲ್ಲಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ‘ರಾಜ್ಯದಲ್ಲಿರುವ ಕಾಳಿಕಾದೇವಿ ದೇವಸ್ಥಾನಗಳ ಸ್ಥಿತಿಗತಿ ಬಗ್ಗೆ ಮಾಹಿತಿ ಪುಸ್ತಕ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಎಲ್ಲ ಜಿಲ್ಲೆಗಳಲ್ಲಿಯೂ ಪರಿಷತ್ತಿನ ಮಹಿಳಾ, ಯುವ ಹಾಗೂ ಜಿಲ್ಲಾ ಘಟಕ ರಚಿಸಲಾಗುವುದು’ ಎಂದರು.

ಪರಿಷತ್ ಸಂಸ್ಥಾಪಕ ಅಧ್ಯಕ್ಷ ಎಚ್.ವಿ.ಸತೀಶಕುಮಾರ್, ‘ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಸಮುದಾಯದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುವುದು. ಕೋಚಿಂಗ್‌ ನೀಡಿ ಪರೀಕ್ಷೆಗೆ ಪ್ರೇರೇಪಿಸಲು ಪರಿಷತ್‌ ಮುಂದಾಗಿದೆ’ ಎಂದು ಹೇಳಿದರು.

ರಾಜ್ಯ ಪೌರಸೇವಾ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಲ್.ನಾರಾಯಣಾಚಾರ್, ವಿಶ್ವಕರ್ಮ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಶಂಕರಮೂರ್ತಿ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಇ.ಮೌನೇಶಾಚಾರ್, ಮಹಾಲಿಂಗಾಚಾರ್, ಎ.ಶಂಕರಾಚಾರ್, ನಾಗೇಂದ್ರಾಚಾರ್, ಗಾಯತ್ರಿ, ಛಾಯಾದೇವಿ, ವಿಜಯಕುಮಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.