ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲ್ಲೋಡು ವೇದಾವತಿ ಬ್ಯಾರೇಜ್‌ಗೆ ಹರಿದು ಬಂದ ನೀರು

Last Updated 28 ಫೆಬ್ರುವರಿ 2020, 9:50 IST
ಅಕ್ಷರ ಗಾತ್ರ

ಹೊಸದುರ್ಗ: ಬರಿದಾಗಿದ್ದ ತಾಲ್ಲೂಕಿನ ಕೆಲ್ಲೋಡು ವೇದಾವತಿ ನದಿ ಬ್ಯಾರೇಜ್‌ಗೆ ಸಮೀಪದ ಬಲ್ಲಾಳಸಮುದ್ರ ಹಾಗೂ ಕೊರಟಿಕೆರೆ ಬ್ಯಾರೇಜ್‌ನಿಂದ ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಗುರುವಾರ ನೀರು ಬಿಡಿಸಿದ್ದಾರೆ.

ಪಟ್ಟಣದ ಜನರ ಕುಡಿಯುವ ನೀರು ಒದಗಿಸಬೇಕು ಎಂಬ ಉದ್ದೇಶದಿಂದ ನಿರ್ಮಿಸಿದ್ದ ಬ್ಯಾರೇಜ್‌ ಕಳೆದ ಜನವರಿಯಲ್ಲಿಯೇ ಬರಿದಾಗಿದ್ದರಿಂದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈ ಸಮಸ್ಯೆ ನಿವಾರಣೆಗೆ ತ್ವರಿತವಾಗಿ ಏನು ಕ್ರಮ ಕೈಗೊಳ್ಳಬೇಕೆಂದು ಶಾಸಕರು ಪುರಸಭೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಜೊತೆಗೆ
ಚರ್ಚಿಸಿದ್ದರು.

ಆಗ ವೇದಾವತಿ ನದಿ ಪಾತ್ರದಲ್ಲಿ ಬರುವ ಬಲ್ಲಾಳಸಮುದ್ರ, ಕೊರಟಿಕೆರೆ ಬಳಿ ಇರುವ ಬೃಹತ್‌ ಬ್ಯಾರೇಜ್‌ಗಳು ಭರ್ತಿಯಾಗಿವೆ. ಈ ಎರಡೂ ಬ್ಯಾರೇಜ್‌ನಲ್ಲಿರುವ ಸುಮಾರು 3 ಮೀಟರ್‌ ನೀರಿನಲ್ಲಿ ತಲಾ 1 ಮೀಟರ್‌ ನೀರನ್ನು ಕೆಲ್ಲೋಡಿನ ಬ್ಯಾರೇಜ್‌ಗೆ ಬಿಡಿಸಬೇಕು. ಇದರಿಂದ ಎರಡು ತಿಂಗಳು ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಸಹಕಾರಿಯಾಗುತ್ತದೆ ಎಂದು ಬ್ಯಾರೇಜ್‌ ನೀರು ಬಿಡಿಸಲು ಮುಂದಾದಾಗ ಸ್ಥಳೀಯರಿಂದ ವಿರೋಧ
ವ್ಯಕ್ತವಾಗಿತ್ತು.

ಶಾಸಕ ಗೂಳಿಹಟ್ಟಿ ಡಿ.ಶೇಖರ್‌ ಭದ್ರಾ ಮೇಲ್ದಂಡೆ ಯೋಜನೆಯ ಎಂಜಿನಿಯರ್‌, ಪೊಲೀಸ್‌ ಇಲಾಖೆ ಹಾಗೂ ಪುರಸಭೆಯ ಅಧಿಕಾರಿ ಸಂಯುಕ್ತ ಆಶ್ರಯದಲ್ಲಿ ಕೊರಟಿಕೆರೆ, ಬಲ್ಲಾಳಸಮುದ್ರ ಸೇರಿ ಸಮೀಪದ ಇನ್ನಿತರ ಗ್ರಾಮದ ಜನರ ಮನವೊಲಿಸಿ ನೀರು ಬಿಡಿಸಿದ್ದಾರೆ. ಶಾಸಕರ ಕಾರ್ಯಕ್ಕೆ ಪಟ್ಟಣದ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಈ ನೀರು ಎಷ್ಟು ದಿನ ಹರಿದು ಬರುತ್ತದೆಯೋ ಗೊತ್ತಿಲ್ಲ. ಹಾಗಾಗಿ ಕುಡಿಯುವ ನೀರಿಗೆ ಶಾಶ್ವತ ಪರಿಹಾರದ ಯೋಜನೆ ರೂಪಿಸಬೇಕು ಎಂಬುದು ಸಾರ್ವಜನಿಕರಮನವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT