ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ವಿ.ವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ನೀರು

Last Updated 1 ಫೆಬ್ರುವರಿ 2023, 4:46 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ರೈತರ ಜೀವನಾಡಿ ವಾಣಿವಿಲಾಸ ಸಾಗರದಿಂದ ಫೆ. 3ರಿಂದ ಪ್ರಸಕ್ತ ವರ್ಷ ಮೂರು ಬಾರಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಲು ಸೋಮವಾರ ಜಿಲ್ಲಾಡಳಿತ ಸಭಾಂಗಣದಲ್ಲಿ ನಡೆದ ಜಿಲ್ಲಾಡಳಿತ, ನೀರಾವರಿ ಇಲಾಖೆ, ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಬೇಸಿಗೆ ಸಮೀಪಿಸುತ್ತಿರುವುದರಿಂದ ರೈತರ ಬೆಳೆಗಳಾದ ಮೆಕ್ಕೆಜೋಳ, ತೆಂಗು, ತೋಟಗಾರಿಕಾ ಬೆಳೆಗಳಿಗೆ ನೀರಿನ ಅವಶ್ಯಕತೆ ಇರುವುದರಿಂದ ಮೂರು ಬಾರಿ ನೀರು ಹರಿಸಲು ನಿರ್ಧರಿಸಲಾಗಿದೆ. ಇದರಿಂದ ತಾಲ್ಲೂಕಿನ 12,155 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸಲಾಗುವುದು. ಪ್ರಸ್ತುತ ಡ್ಯಾಂನಲ್ಲಿ 129.95 ಅಡಿ ನೀರು ಇರುವುದರಿಂದ ರೈತರು ಸಂತೋಷವಾಗಿದ್ದಾರೆ.

ಮೊದಲನೇ ಕಂತಿನ ನೀರು ಫೆ. 2ರಿಂದ ಮಾರ್ಚ್ 4ರವರೆಗೆ ಹರಿಯಲಿದೆ. ಎರಡನೇ ಕಂತಿನ ನೀರು ಮಾರ್ಚ್ 24ರಿಂದ ಏ. 23ರವರೆಗೆ. ಮೂರನೇ ಕಂತಿನ ನೀರು
ಮೇ 19ರಿಂದ ಜೂನ್ 17ರವರೆಗೆ ನೀರು ಹರಿಯಲಿದೆ.

ಗಾಯತ್ರಿ ಜಲಾಶಯ ಪ್ರದೇಶಕ್ಕೆ:
1ನೇ ಕಂತಿನ ನೀರು
ಮಾರ್ಚ್ 10ರಿಂದ 29ರವರೆಗೆ, 2ನೇ ಕಂತಿನ ನೀರು ಏ. 28ರಿಂದ
ಮೇ 17ರವರೆಗೆ ನೀರು ಹರಿಸಲಾಗುವುದು.

ನೀರು ಹರಿಯಲಿರುವ ಅಚ್ಚಕಟ್ಟು ಪ್ರದೇಶದ ರೈತರು ತಮ್ಮ ಜಾನುವಾರುಗಳ ಸಂರಕ್ಷಣೆಗೆ ಎಚ್ಚರ ವಹಿಸಬೇಕು. ಜತೆಗೆ ನೀರನ್ನು ಮಿತವ್ಯಯವಾಗಿ ಬಳಸಬೇಕು. ರೈತರು ನೀರು ಪೋಲು ಮಾಡಬಾರದು ಎಂದು ನೀರಾವರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT