ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಾಲ್ಮೀಕಿ ಸಮುದಾಯದ ಮಾದರಿಯಲ್ಲಿ ಲಿಂಗಾಯತ ಪಂಚಾಮಸಾಲಿ ಹೋರಾಟ’

Last Updated 18 ಜನವರಿ 2023, 4:29 IST
ಅಕ್ಷರ ಗಾತ್ರ

ಚಿತ್ರದುರ್ಗ: ಮೀಸಲಾತಿಗಾಗಿ ವಾಲ್ಮೀಕಿ ಸಮುದಾಯ ನಡೆಸಿದ ಹೋರಾಟದ ಮಾದರಿಯಲ್ಲಿ ಲಿಂಗಾಯತ ಪಂಚಾಮಸಾಲಿ ಹೋರಾಟ ನಡೆಯಲಿದೆ. ಮಾಡು ಇಲ್ಲವೆ ಮೀಸಲಾತಿ ಪಡೆದು ಮಡಿ ಘೋಷವಾಕ್ಯದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಪ್ರಾರಂಭವಾಗಿದೆ ಎಂದು ಲಿಂಗಾಯತ ಪಂಚಮಸಾಲಿ ಮಹಾಸಭಾ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್‌.ಎಂ.ಎಲ್‌. ತಿಪ್ಪೇಸ್ವಾಮಿ ತಿಳಿಸಿದರು.

‘2ಎ’ ಮೀಸಲಾತಿ ನೀಡುವುದಾಗಿ ಈಗಾಗಲೇ ಮುಖ್ಯಮಂತ್ರಿಗಳು 6 ಬಾರಿ ಮಾತು ತಪ್ಪಿದ್ದಾರೆ. ಈ ವಿಳಂಬ ನೀತಿ ಖಂಡಿಸಿ ಹಾಗೂ ಶೀಘ್ರ ಹಿಂದುಳಿದ ವರ್ಗದ ಆಯೋಗದಿಂದ ಅಂತಿಮ ವರದಿ ಪಡೆಯಬೇಕು. ಜ.21ರಂದು ಜಿಲ್ಲೆಯ ಸಮಾಜದ ಬಾಂಧವರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸರ್ಕಾರ ಶೀಘ್ರ ಮನವಿಗೆ ಸ್ಪಂದಿಸಬೇಕು. ಇಲ್ಲವಾದರೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸಲಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಕೆ.ಸಿ. ಗಂಗಾಧರಪ್ಪ, ಯುವ ಘಟಕದ ಜಿಲ್ಲಾಧ್ಯಕ್ಷ ಎಚ್‌.ಎಂ. ಮಂಜುನಾಥ್‌, ಬಿ.ವಿ.ಕೆ. ಎಸ್‌. ಕಾರ್ತಿಕ್, ಎಂ.ಎಸ್‌. ಗಿರೀಶ್‌, ಗ್ರಾಮ ಪಂಚಾಯಿತಿ ಸದಸ್ಯ ಎಸ್‌. ತಿಪ್ಪೇಸ್ವಾಮಿ, ಮನು ತಮಟಕಲ್ಲು, ಎಲ್‌.ಎಂ. ವಿಜಯ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT