ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರ ಅಭ್ಯುದಯಕ್ಕಾಗಿ ಸತ್ವ ಸಂಸ್ಥೆ: ಶಶಿಕಲಾ ರವಿಶಂಕರ್

Published : 10 ಆಗಸ್ಟ್ 2024, 15:40 IST
Last Updated : 10 ಆಗಸ್ಟ್ 2024, 15:40 IST
ಫಾಲೋ ಮಾಡಿ
Comments

ಹಿರಿಯೂರು: ಮಹಿಳೆಯರು ಹಾಗೂ ಮಕ್ಕಳ ಅಭ್ಯುದಯಕ್ಕೆ ಒತ್ತಾಸೆಯಾಗಿ ನಿಂತಿರುವ ಸಮಾನ ಮನಸ್ಕ ಮಹಿಳೆಯರ ಗುಂಪು ‘ಸತ್ವ’ವಾಗಿದೆ ಎಂದು ಸತ್ವ ಸಂಸ್ಥೆಯ ಅಧ್ಯಕ್ಷೆ ಶಶಿಕಲಾ ರವಿಶಂಕರ್ ಹೇಳಿದರು.

ತಾಲ್ಲೂಕಿನ ಮಾಯಸಂದ್ರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಜಾಗೃತಿ ಶಿಬಿರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ನೊಂದ ಮಹಿಳೆಯರ ಬೆಂಬಲಕ್ಕೆ ನಿಂತು ಚೇತೋಹಾರಿಗಳನ್ನಾಗಿಸುವಲ್ಲಿ ಸತ್ವ ಗುಂಪಿನಲ್ಲಿರುವ ಸದಸ್ಯರೆಲ್ಲರದ್ದು ಒಂದೇ ಧ್ವನಿ. ಹಲವು ರೀತಿಯ ಶೋಷಣೆಗೆ ಸಿಲುಕಿ ನಲುಗುತ್ತಿರುವ ಮಹಿಳೆಯರಿಗೆ ಸೇವಾ ಸಂಸ್ಥೆಗಳ ಅವಶ್ಯಕತೆ ಇದೆ. ಆರೋಗ್ಯವಂತ ಮಹಿಳೆಯರು ಆತ್ಮಬಲ ಹೆಚ್ಚಿಸಿಕೊಂಡು, ಆರ್ಥಿಕ ಸದೃಢತೆಯ ಮೂಲಕ ಸ್ವಾವಲಂಬನೆಯ ಬದುಕು ನಡೆಸಬೇಕು’ ಎಂದು ಅವರು ಸಲಹೆ ನೀಡಿದರು.

ಸತ್ವ ಸಂಸ್ಥೆಯಿಂದ ಮಕ್ಕಳಿಗೆ ಕೇರಂ ಬೋರ್ಡ್ ಹಾಗೂ ಆಟದ ಪರಿಕರ ವಿತರಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷೆ ಯಮುನಾ ಉಮಾಕಾಂತ, ಸದಸ್ಯರಾದ ಸರ್ವಮಂಗಳಾ ರಮೇಶ್, ಶ್ರೀಕರ, ತ್ರಿವೇಣಿ ಸತೀಶ್, ಗೀತಾ ಹಿಮಾಚಲೇಶ್, ಲತಾ ಶಿವಪ್ರಸಾದ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಪ್ರೀತಾ, ಮುಖ್ಯ ಶಿಕ್ಷಕಿ ಉಷಾರಾಣಿ, ಸಹಶಿಕ್ಷಕಿ ಶೈಲಜಾ ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT